ಬರಹಗಾರ ಹೊ.ರಾ. ಸತ್ಯನಾರಾಯಣರಾವ್ ಅವರು 1930 ಫೆಬ್ರುವರಿ 28ರಂದು ಕೋಲಾರ ಜಿಲ್ಲೆಯ ಬಂಗಾರಪೇಟೆಯಲ್ಲಿ ಜನಿಸಿದರು. ತಾಯಿ ಜಾನಕೀಬಾಯಿ. ತಂದೆ ಎಚ್.ಸಿ. ರಾಮರಾವ್. ಬೆಂಗಳೂರಿನಲ್ಲಿ ಬಿ.ಎ. ಪದವೀಧರರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವೀಧರರು. ಭಾರತೀಯ ದೂರವಾಣಿ ಕಾರ್ಖಾನೆಯಲ್ಲಿ ವೃತ್ತಿಯಲ್ಲಿದ್ದರು. ಭ್ರಮರ, ಮೂರು ಹೆಣ್ಣು ನೂರು ತೆರ, ಗಾಜಿನ ಮೆನ, ಅಪರಾಜಿತೆ, ಸಾವಿತ್ರಿ, ಪ್ರೇಮ ನಕ್ಷತ್ರ, ವಸಂತ ಚಂದ್ರ ಇತ್ಯಾದಿ ತೆಲುಗಿನಿಂದ ಕನ್ನಡಕ್ಕೆ ಅನುವಾದಿಸಿದ ಕಾದಂಬರಿಗಳು. ವೀರೇಶಲಿಂಗಂ ಪಂತುಲು, ಪೋತನ, ಮೇಡಂ ಕ್ಯೂರಿ, ಚಂದ್ರಶೇಖರ ಆಜಾದ್, ಎಣ.ಆರ್. ಶ್ರೀ, ಜೀವನ ಮತ್ತು ಕಾರ್ಯ-ಜೀವನ ಚರಿತ್ರೆಗಳು, ಕನ್ನಡ ತಾಯಿಗೆ ನುಡಿನಮನಗಳು -ಇವು ಪ್ರಮುಖ ಕೃತಿಗಳು.