ಡಾ.ಎಚ್ ಡಿ ಪ್ರಶಾಂತ್, 1970 ರ ಡಿಸೆಂಬರ್ 4 ರಂದು ಜನಿಸಿದರು. ಎಂ.ಎ. ಪಿ.ಎಚ್ ಡಿ, ಎಂ ಫಿಲ್ ಪದವೀಧರರು. ಹಂಪಿಯ ಕನ್ನಡ ವಿ.ವಿ. ಅಭಿವೃದ್ಧಿ ಅಧ್ಯಯನ ವಿಭಾಗದಲ್ಲಿ ಪ್ರಾಧ್ಯಾಪಕರು. ಅಭಿವೃದ್ಧಿ ,ಸಮಾಜಶಾಸ್ತ್ರ, ಶೈಕ್ಷಣಿಕ ಸಮಾಜಶಾಸ್ತ್ರ ವಿಷಯಗಳಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. ಅಭಿವೃದ್ಧಿ ಸಮಾಜಶಾಸ್ತ್ರ ಹಕ್ಕು ಆಧಾರಿತ ಅಭಿವೃದ್ಧಿ ಮತ್ತು ಪರ್ಯಾಯ ಅಭಿವೃದ್ಧಿ, ನವ ಉದಾರವಾದ, ಅಕ್ಷರ, ಆಹಾರ ಆರೋಗ್ಯದಲ್ಲಿ ಸಮಾನತೆ, ರಾಜಕೀಯ ಆರ್ಥಿಕತೆ, ಶೈಕ್ಷಣಿಕ ಸಮಾಜಸ್ತ್ರ-ಗುಣಾತ್ಮಕ ಸಾರ್ವತ್ರೀಕರಣಕ್ಕೆ ಇರುವ ಸವಾಲುಗಳು, ಶಾಲೆ- ಶಿಕ್ಷಣದ ವಿಕೇಂದ್ರೀಕರಣ, ಗ್ರಾಮ ಮತ್ತು ಕೃಷಿ ಸಮಾನ ಅಧ್ಯಯನ- ಜಾಗತಿಕ ಮಾರುಕಟ್ಟೆ ಮತ್ತು ಗ್ರಾಮೀಣ ಅಭಿವೃದ್ದಿ ಇತ್ಯಾದಿ ಆಸಕ್ತಿ ಕ್ಷೇತ್ರಗಳು. ಕರ್ನಾಟಕ ಜನಸಮುದಾಯ ಕೋಶ, ಶಾಲೆ ಬಿಸಿಯೂಟದ ಅಧ್ಯಯನ ವರದಿ, ಸಾಮಾಜಿಕ ತಲ್ಲಣಗಳು, ಸಾಮಾಜಿಕ ಆಕಾರರೇಖೆ ಇತ್ಯಾದಿ ಪ್ರಮುಖ ಕೃತಿಗಳು.ಕರ್ನಾಟಕ ಅಭಿವೃದ್ಧಿ ಮಂಡಳಿ ಪೀಠ ನ್ಯಾಕ್ ಸಂಯೋಜಕ, ಶೈಕ್ಷಣಿಕ ಉಪ ಕುಲಸಚಿವರಾಗಿಯೂ (2007 ಮಾರ್ಚ್ ದಿಂದ 2012 ರ ಸೆ.17ರವರೆಗೆ) ಕಾರ್ಯ ನಿರ್ವಹಿಸಿದ್ದಾರೆ.