ಗುರುರಾಜ ಬೆಣಕಲ್ ಅವರು ಮೂಲತಃ ಬಾಗಲಕೋಟೆಯವರು. ಮಕ್ಕಳ ಸಾಹಿತ್ಯವೂ ಒಳಗೊಂಡು ಸುಮಾರು 40ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ.
ಕೃತಿಗಳು: ಕತೆ ಹೇಳುವೆ, ಅಪೂರ್ವ ದಾನ, ಒಂದೂರಲ್ಲಿ...., ಬುದ್ಧಿವಂತ ಶಿಷ್ಯರು, ಹನಿ ಹನಿ ಮಿನಿ ಮಿನಿ ಕತೆಗಳು, ಕತೆಗಳೋ ಕತೆಗಳು, ಏನ್ ಕತೆ ಏನ್ ಕತೆ, ಗಿಣಿರಾಮ, ಕರಡೀ ಮದುವೆ, ಮಕ್ಕಳ ಕವಿತೆಗಳು, ಗಣಪ ಟೊಣಪ ಮತ್ತು ಮಕ್ಕಳ ಇತರ ಕವಿತೆಗಳು, ಹಾಡು ಹಕ್ಕಿ ಓಡಿ ಬಾರೆ, ಹೂವೇ ಹೂವೇ, ಒಗಟ ಬಿಡಿಸೊ ಜಾಣ ಎನಿಸೊ, ಪ್ರೇರಕ ಪ್ರಸಂಗಗಳು - ಬಾಳದಾರಿಯ ದೀಪಗಳು, ಓದಿವನಿಂದು ಪ್ರೇರಣೆಗೆಂದು, ಮಂಗನ ಮದುವೆ ಮತ್ತು ಮಕ್ಕಳ ಇತರ ಕವನಗಳು, ರೋಚಕ ಒಗಟುಗಳು ಮತ್ತು ಪದ್ಯಗಳಲ್ಲಿ ಕ್ವಿಜ್.
ಅವರ ’ಅನ್ನ ಜೇನು’ ಕೃತಿಗೆ ರಾಷ್ಟ್ರಕವಿ ಕುವೆಂಪು ಪುರಸ್ಕಾರ ಹಾಗೂ ಹುಬ್ಬಳ್ಳಿಯ ಮೂರು ಸಾವಿರ ಮಠದ ಗ್ರಂಥ ಪುರಸ್ಕಾರ ಲಭಿಸಿದೆ. ಅವರು 2018 ಏಪ್ರಿಲ್ 09ರಂದು ನಿಧನರಾದರು.