ಗುರುನಾಥ ಬೋರಗಿ- ಹೆಸರಿನಿಂದ ಪರಿಚಿತರಾದ ಗುರುನಾಥ ಎಂ.ಬಡಿಗೇರ ಹುಟ್ಟಿದ್ದು ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಬೋರಗಿ ಗ್ರಾಮದಲ್ಲಿ. ತಂದೆ ಮಹಾರುದ್ರಪ್ಪ. ತಾಯಿ ರಮಾಬಾಯಿ. ಓದಿದ್ದು ಎಸ್.ಎಸ್.ಎಲ್.ಸಿ. ಮಾತ್ರ. ಭಕ್ತಿಗೀತೆ, ಜನಪದಗೀತೆ, ಭಾವಗೀತೆ, ಸಿನಿಮಾಗೀತೆ, ಕಗ್ಗ, ಚುಟುಕು, ಹಾಯ್ಕು , ನವ್ಯಕವಿತೆ ಹೀಗೆ ಎಲ್ಲ ಪ್ರಕಾರದ ಸಾಹಿತ್ಯರಚನೆ ಮಾಡಿದ್ದು, ಅವರ ಮೊದಲ ಪುಸ್ತಕ 'ತತ್ತಿಗರ್ಭದ ಹಳದಿ'. ನಂತರ 'ತಂಬೂರಿ' ಕವನ ಸಂಕಲನ ಪ್ರಕಟವಾಗಿದೆ. ಕೆಲವು ಕನ್ನಡ ಸಿನೆಮಾಗಳಿಗೂ ಹಾಡು ಬರೆದಿದ್ದಾರೆ. ಹಲವು ಪತ್ರಿಕೆಗಳಲ್ಲಿ ಮುಖಪುಟ ಅಕ್ಷರ ವಿನ್ಯಾಸಕರಾಗಿ, ಉಪಸಂಪಾದಕ/ವರದಿಗಾರರಾಗಿ ಸೇವೆ ಸಲ್ಲಿಸಿದ್ದಾರೆ.