ಲೇಖಕ ಗೋವಿಂದರಾಜ ತಳಕೋಡ ಅವರು ಧಾರವಾಡ ಜಿಲ್ಲೆಯ ನರಗುಂದ ತಾಲೂಕಿನ ಕೊಣ್ಣೂರು ಗ್ರಾಮದವರು. ಪ್ರಾಥಮಿಕ-ಪ್ರೌಢಶಿಕ್ಷಣ ಹುಟ್ಟೂರಿನಲ್ಲಿ ನಂತರ ನರಗುಂದದಲ್ಲಿ ಪಿಯುಸಿ ಪೂರ್ಣಗೊಳಿಸಿದರು. ಬಳ್ಳಾರಿಯ ಸಕಾರಿ ಪ್ರಥಮ ದರ್ಜೆ ಕಲೇಜಿನಲ್ಲಿ ಬಿ.ಎ. ಹಾಗೂ ಗುಲಬರ್ಗಾ ವಿ.ವಿ.ಯಿಂದ ಎಂ.ಎ ಹಾಗೂ ಎಂ.ಫಿಲ್ ಮತ್ತು ಧಾರವಾಡದ ಕರ್ನಾಟಕ ವಿ.ವಿ.ಯಿಂದ ಪಿಎಚ್ ಡಿ ಪದವೀಧರರು.
ಚೆನ್ನೈನಲ್ಲಿಯ ಬಹುಭಾಷೆ ಅಧ್ಯಯನ ಸಂಸ್ಥೆಯಲ್ಲಿ ಸಹಾಯಕ ಸಂಪಾದಕರಾಗಿ ಸೇವೆ ನಂತರ, ಕಳೆದ 15 ವರ್ಷದಿಂದ ಧಾರವಾಡದ ಜೆಎಸ್ ಎಸ್ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿದ್ದಾರೆ.
ಕೃತಿಗಳು: ಕನ್ನಡ ಸಾಹಿತ್ಯ ವಿಮರ್ಶೆಗೆ ಜಿ.ಎಸ್. ಆಮೂರವರ ಕೊಡುಗೆ, ಸಮಾಲೋಕ, ಕಲ್ಲು ಕರಗಿದಾಗ, ಮನವ ಕಾಡುವ ಮಾತು, ಪ್ರೊ. ಸಂ.ಶಿ. ಭೂಸನೂರಮಠ (ಜೀವನ ಚರಿತ್ರೆ), ಜಿ.ಜಿ. ದೊಡವಾಡ (ಜೀವನ ಚರಿತ್ರೆ), ರಾಷ್ಟ್ರೀಯ-ಅಂತಾರಾಷ್ಟ್ರೀಯ ವಿಚಾರ ಸಂಕಿರಣಗಳಲ್ಲಿ ಪ್ರಬಂಧಗಳನ್ನು ಮಂಡಿಸಿದ್ದಾರೆ.