ಜಿ.ಕೆ. ದೇವರಾಜಸ್ವಾಮಿ ಅವರು ಕನ್ನಡ ಸಂಶೋಧನಾ ಕ್ಷೇತ್ರದಲ್ಲಿ ಗುರುತಿಸಿಕೊಂಡು ವಿಭಿನ್ನ ದೃಷ್ಠಿಕೋನದ ಮೂಲಕ ಹೊಸ ಆಯಾಮಗಳೊಂದಿಗೆ, ಹೊಸ ಹೊಸ ವಿಚಾರಗಳನ್ನು, ಅಜ್ಞಾತವಾಗಿರುವ ಸಂಗತಿಗಳನ್ನು ಹೊರತರುತ್ತಿದ್ದಾರೆ. ಸಾಹಿತ್ಯಸಂಸ್ಕೃತಿ ಮತ್ತು ಇತಿಹಾಸದ ಕೊಂಡಿಯಾಗಿ ಕೆಲಸ ಮಾಡುತ್ತಿದ್ದಾರೆ. 'ಕಳಚುರಿ ಶಾಸನಗಳು' ಬೃಹತ್ ಶಾಸನ ಸಂಪಾದನಾ ಕೃತಿ, 'ಕನ್ನಡ ಲಿಪಿ ವಿಕಾಸ', 'ಅಧಿಷ್ಠಾನ-ಬಾಯಿಪಾಠ ಪುಸ್ತಕ' ಎಂಬ ಮಹತ್ವ ಕೃತಿಗಳನ್ನು ರಚಿಸಿದ್ದಾರೆ.