ಎಫ್ ಡಿ ಗಡ್ಡಿಗೌಡರ ಅವರು ಬೆಳಗಾವಿಯ ಬೈಲಹೊಂಗಲ ಜಕನಾಯ್ಕನಕೊಪ್ಪದವರು. ಅವರು ಸಾಹಿತಿ, ಸಂಪನ್ಮೂಲ ವ್ಯಕ್ತಿ , ಶರಣ ಚಿಂತಕ ಮತ್ತು ಕನ್ನಡ ಸ್ನಾತಕೋತ್ತರ ಅಧ್ಯಯನ ಕೇಂದ್ರ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು, ಬೈಲಹೊಂಗಲದ ಮುಖ್ಯಸ್ಥರಾಗಿದ್ದಾರೆ. ‘ಕನ್ನಡ ಸಾಹಿತ್ಯಕ್ಕೆ ವಿ. ಸಿ. ಐರಸಂಗರ ಕೊಡುಗೆ’ ಎಂಬ ವಿಷಯದಲ್ಲಿ ಪಿಹೆಚ್.ಡಿ ಪಡೆದಿದ್ದಾರೆ. 30 ಕ್ಕೊ ಹೆಚ್ಚು ಸಂಶೋಧನಾತ್ಮಕ ಲೇಖನಗಳು ಪ್ರಕಟಗೊಂಡಿದ್ದು. ಜಿಲ್ಲಾ ಮತ್ತು ರಾಜ್ಯ ಮಟ್ಟದ ಕವಿಗೋಷ್ಠಿಗಳಲ್ಲಿ ಕವನ ವಾಚನ ಮಾಡಿದ್ದಾರೆ.
ಕೃತಿಗಳು : ತಲ್ಲಣಗಳ ನಡುವೆ ನೆಮ್ಮದಿಯ ಹುಡುಕಾಟ(ಕವನ ಸಂಕಲನ) ವಚನ ಭಾಸ್ಕರ ( ಆಧುನಿಕ ವಚನಗಳು ) ಪ್ರೇಮ ಪರ್ವ ( ಚಲನಚಿತ್ರ ಮಾದರಿ ಗೀತೆಗಳು) ವಾಸ್ತವದ ಹತ್ತಿರ (ಹನಿಗವನಗಳು) ದಾಸರ ದಾರಿಯಲ್ಲಿ ( ಕೀರ್ತನೆಗಳು )
ಪ್ರಶಸ್ತಿಗಳು: ಕರ್ನಾಟಕ ಶಿಕ್ಷಕ ರತ್ನ ,ರಾಷ್ಟ್ರೀಯ ಶಿಕ್ಷಕ ರತ್ನ, ರಾಷ್ಟ್ರೀಯ ಶಿಕ್ಷಕ ಭೂಷಣ ಪ್ರಶಸ್ತಿ