ಕವಿ ದೇವೇಂದ್ರ ಕಟ್ಟಿಮನಿ ಅವರು ಬೀದರ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಹಿಪ್ಪರಗಬಾಗ ಗ್ರಾಮದವರು. ತಂದೆ ಅಂಬಣ್ಣ ಕಟ್ಟಿಮನಿ , ತಾಯಿ ಕಾಶಿಬಾಯಿ, ಹುಟ್ಟೂರಿನಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ, ಪಿಯುಸಿ ಹಾಗೂ ಪದವಿ ಶಕ್ಷಣ ಕಮಲಾಪುರದಲ್ಲಿ, ರಾಯಚೂರಿನಲ್ಲಿ ಬಿ.ಪಿ.ಇಡಿ ಶಿಕ್ಷಣ, ಶಿವಮೊಗ್ಗದ ಕುವೆಂಪು ವಿ.ವಿ.ಯಲ್ಲಿ ಎಂ.,ಎ. ಪದವೀಧರರು. ಸದ್ಯ, ರಾಯಚೂರು ತಾಲೂಕಿನ ಇಡಪನೂರು ಗ್ರಾಮದ ಸರಕಾರಿ ಪ್ರೌಢಶಾಲೆಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಾಗಿದ್ದಾರೆ.
ಕಥೆ,ಕವನ ರಚನೆ, ಯೋಗಾಭ್ಯಾಸ, ರೆಡ್ ಕ್ರಾಸ್ ಮತ್ತು ಸ್ಕೌಟಿಂಗ್ ಮೂಲಕ ಸೇವೆ ಸಲ್ಲಿಸುವ ಇವರು, 2019 ರಿಂದ ಶಾಲಾ ಮಕ್ಕಳ ಪ್ರತಿಭಾ ಪುರಸ್ಕಾರಕ್ಕಾಗಿ ಶ್ರೀ ಅಂಬಣ್ಣ ಕಟ್ಟಿಮನಿ ಸ್ಮರಣಾರ್ಥ ಅಭಿಜ್ಞಾನ ಪ್ರಶಸ್ತಿ ಪ್ರಾರಂಭಿಸಲಾಗಿದೆ. 2020 ರಲ್ಲಿ ರಾಯಚೂರಿನಲ್ಲಿ ಶ್ರೀ ಕೆ.ತಿಮ್ಮಯ್ಯ ಸ್ಮರಣಾರ್ಥ ಮಾಸ್ಕ್ ಬ್ಯಾಂಕ್ ಸಂಘಟಿಸಿ 9500 ಮಾಸ್ಕಗಳನ್ನು ಶಿಕ್ಷಣ ಸಚಿವರಿಗೆ ಹಸ್ತಾಂತರ. ಕಲಬುರಗಿಯ ಡಾ. ಬಿ.ಆರ್.ಅಂಬೇಡ್ಕರ್ ವಿಚಾರ ವೇದಿಕೆಯು ಕಲಬುರಗಿಯ ವಿಭಾಗ ಮಟ್ಟದ ಕವನ ವಾಚನದಲ್ಲಿ(2004 ಮತ್ತು 2005 ) ಕ್ರಮವಾಗಿ ತೃತಿಯ ಮತ್ತು ಪ್ರಥಮ ಸ್ಥಾನ, 2015 ರಲ್ಲಿ ಉತ್ತಮ ಸ್ಕೌಟ್ ಮಾಸ್ಟರ್ ಪ್ರಶಸ್ತಿ., :- 2019 ರಲ್ಲಿ ರೊಟರಿ ಕ್ಲಬ್ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಲಭಿಸಿವೆ.
ಕೃತಿಗಳು : ಭೀಮಾಮೃತ (ಅಂಬೇಡ್ಕರ ಕುರಿತ ಖಂಡ ಕಾವ್ಯ), ಸುಣ್ಣದ ಸಾಲು (ಕ್ರೀಡಾ ಗಜಲ್ ಗಳು) ಸೇರಿದಂತೆ ನಾಡಿನ ವಿವಿಧ ಸ್ಮರಣೆ ಸಂಚಿಕೆ, ಸಂಪಾದಿತ ಗ್ರಂಥಗಳಲ್ಲಿ ಇವರ ಸಾಹಿತ್ಯಕ ರಚನೆಗಳು ಪ್ರಕಟಗೊಂಡಿವೆ.