ಡಿ.ಕೆ.ಭೀಮಸೇನರಾವ್ ಅವರು ರಾಯಚೂರು ಜಿಲ್ಲೆಯ ಸಿಂಧನೂರು ತಾಲ್ಲೂಕಿನ ದಿದ್ದಿಗಿ ಗ್ರಾಮದಲ್ಲಿ 1904 ಏಪ್ರಿಲ್ 08ರಂದು ಜನಿಸಿದರು. ತಂದೆ ಕೇಶವರಾವ್, ತಾಯಿ ಲಕ್ಷ್ಮೀಬಾಯಿ. 1922ರಲ್ಲಿ ಉರ್ದು ಮಾಧ್ಯಮದಲ್ಲಿ ಮೆಟ್ರಿಕ್ ಪರೀಕ್ಷೆ ಪಾಸ್ ಮಾಡಿದರು. ಹೈದ್ರಾಬಾದ್ನ ಉಸ್ಮಾನಿಯಾ ವಿಶ್ವವಿದ್ಯಾಲಯದಿಂದ ಬಿ.ಎ. ಪದವಿ ಇವರು ಕನ್ನಡದಲ್ಲಿ ಪ್ರಥಮ ಸ್ಥಾನ ಪಡೆದರು. 1929ರಲ್ಲಿ ಮೈಸೂರು ವಿ.ವಿ.ದಲ್ಲಿ ಕನ್ನಡ ಎಂ.ಎ. ಪೂರ್ಣಗೊಳಿಸಿದರು. ಉಸ್ಮಾನಿಯ ವಿ.ವಿ.ದ ಕನ್ನಡ ವಿಭಾಗದಲ್ಲಿ ಬೋಧಕರಾಗಿ, ಸಂಶೋಧಕರಾಗಿ ವೃತ್ತಿ ಆರಂಭಿಸಿದರು.
ಪ್ರಾಧ್ಯಾಪಕರಾಗಿ ಕನ್ನಡ ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದರು. ಅವರ ಹಸ್ತಪ್ರತಿ ಸಂಗ್ರಹಣೆ ಮತ್ತು ಶಾಸನ ಸಂಗ್ರಹಣೆಗಾಗಿ ಮೈಸೂರು ಸರ್ಕಾರದಿಂದ ರಾಜ್ಯಪ್ರಶಸ್ತಿ ಲಭಿಸಿದೆ. ಆವರು 1969 ನವೆಂಬರ್ 29ರಂದು ನಿಧನರಾದರು.