About the Author

ಯುವ ಪತ್ರಕರ್ತೆ, ಕಥೆಗಾರ್ತಿ ಹಾಗೂ ಆಪ್ತ ಸಮಾಲೋಚಕಿ. ಈ ಎಲ್ಲ ಬಿರುದಾವಳಿಗಳನ್ನೂ ತಮ್ಮದಾಗಿಸಿಕೊಂಡವರು ಚಿತ್ರ ಸಿ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದು ಕೆಲಕಾಲ ಎಲೆಕ್ಟ್ರಾನಿಕ್ ಮಾಧ್ಯಮದಲ್ಲಿ ಕೆಲಸ ಮಾಡಿ ಆನಂತರ ಮನಃಶಾಸ್ತ್ರದತ್ತ ಹೊರಳಿಕೊಂಡವರು. ತಮ್ಮ ಆಸಕ್ತಿಯ ಕ್ಷೇತ್ರದಲ್ಲಿ ಅರ್ಥಪೂರ್ಣವಾಗಿ ಕೆಲಸ ಮಾಡಬೇಕೆಂಬ ತುಡಿತದಿಂದ ಆಪ್ತ ಸಮಾಲೋಚನೆಯಲ್ಲಿ ಡಿಪ್ಲೋಮಾ ಪದವಿ ಪಡೆದರು. ಆ ಕ್ಷೇತ್ರದಲ್ಲಿ ಮತ್ತಷ್ಟು ಪರಿಣತಿ ಪಡೆಯಲೆಂದು ಆನ್ವಯಿಕ ಮನಃಶಾಸ್ತ್ರದಲ್ಲಿ ಎಂ.ಎಸ್ಸಿ ಮಾಡಿಕೊಂಡರು.

ಹದಿಹರೆಯದವರು ಮತ್ತು ಮಕ್ಕಳ ಆಪ್ತ ಸಮಾಲೋಚನೆಯಲ್ಲಿ ವಿಶೇಷ ಪರಿಣತಿ. ಹಾಗೆಯೇ ಮಕ್ಕಳು, ಹದಿಹರೆಯದವರಿಗೆ ಜೀವನ ಕೌಶಲ್ಯ ತರಬೇತಿ ನೀಡುವುದು ಇವರಿಗೆ ಅತ್ಯಂತ ಪ್ರೀತಿಯ ಕೆಲಸ. ತಮ್ಮದೇ ಆದ `ಚಿತ್ರ ಕನ್ಸಲ್ಟನ್ಸಿ' ಸಂಸ್ಥೆ ಆರಂಭಿಸಿ ಶಾಲೆ- ಕಾಲೇಜು ಮಕ್ಕಳು, ಸಂಘ, ಸಂಸ್ಥೆಗಳ ಸದಸ್ಯರಿಗೆ ಗ್ರೂಪ್ ಕೌನ್ಸಲಿಂಗ್, ತರಬೇತಿ ಇತ್ಯಾದಿ ಮಾಡುತ್ತಿದ್ದಾರೆ. ತಮ್ಮ ಕೌನ್ಸಲಿಂಗ್ ಅನುಭವಗಳನ್ನು `ಪ್ರಾಫಿಟ್ ಪ್ಲಸ್' ಪತ್ರಿಕೆಯ ಜನಪ್ರಿಯ ಅಂಕಣ `ಅನಾಮಿಕಳ ಅಂತರಂಗ'ದ ಮೂಲಕ ಕಥೆಯ ರೂಪದಲ್ಲಿ ಪ್ರಸ್ತುತಪಡಿಸುತ್ತಿದ್ದಾರೆ. ಹಲವು ಕಥೆಗಳನ್ನೂ ಬರೆದಿದ್ದಾರೆ. ಇಂಗ್ಲಿಷ್ ಮತ್ತು ಕನ್ನಡ ಉಭಯ ಭಾಷೆಗಳಲ್ಲಿಯೂ ಪರಿಣತಿ ಹೊಂದಿರುವ ಇವರು ಕಾರ್ಯಕ್ರಮ ನಿರೂಪಕರೂ ಹೌದು. ಮನಃಶಾಸ್ತ್ರಕ್ಕೆ ಸಂಬಂಧಿಸಿ ಆಕಾಶವಾಣಿಯಲ್ಲಿಯೂ ಕಾರ್ಯಕ್ರಮ ನೀಡಿದ್ದಾರೆ. ಅನಾಮಿಕಳ ಅಂತರಂಗದಲ್ಲಿ ಬಂದಿರುವ ಕಥೆಗಳು ಈಗ ಪುಸ್ತಕ ರೂಪದಲ್ಲಿ ಹೊರಬಂದಿವೆ.

ಪುಸ್ತಕ: ಅನಾಮಿಕಳ ಅಂತರಂಗ

ಚಿತ್ರ.ಸಿ

BY THE AUTHOR