ಚಾಮರಾಜ ಸವಡಿ ಹುಟ್ಟಿದ್ದು ಬೆಳೆದಿದ್ದು ಕೊಪ್ಪಳ ಜಿಲ್ಲೆಯ ಅಳವಂಡಿಯಲ್ಲಿ. ಸದ್ಯ ಕೊಪ್ಪಳದಲ್ಲಿ ವಾಸ. ಶಿಕ್ಷಣ: ಬಿಎ, ಬಿ.ಲಿಬ್. ಹಾಗೂ ಎಂ.ಎ. ಇಂಗ್ಲಿಷ್. ವೃತ್ತಿಯಲ್ಲಿ ಪತ್ರಕರ್ತರು. ಭಾರತೀಯ ವಾಯುಪಡೆಯ ಕ್ಷಿಪಣಿ ವಿಭಾಗದಲ್ಲಿ ಏರ್ ಮನ್ ಎಂದು ಕೆಲಸ ಮಾಡಿದ ನಂತರ ಕೆಲ ಕಾಲ ಲೈಬ್ರೇರಿಯನ್ ಆಗಿದ್ದರು. ಹಾಯ್ ಬೆಂಗಳೂರ್, ಓ ಮನಸೇ, ವಿಜಯ ಕರ್ನಾಟಕ, ಈಟಿವಿ ಕನ್ನಡ, ಪ್ರಜಾವಾಣಿ, ಸುವರ್ಣ ನ್ಯೂಸ್, ಸಮಯ ನ್ಯೂಸ್, ನ್ಯೂಸ್ 9, ಸಂಯುಕ್ತ ಕರ್ನಾಟಕ, ಕಸ್ತೂರಿ ನ್ಯೂಸ್, ಕನ್ನಡಪ್ರಭ, ವಿಶ್ವವಾಣಿ ಸಂಸ್ಥೆಗಳಲ್ಲಿ ಸಂಪಾದಕೀಯ ವಿಭಾಗದ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.
ಕೃತಿಗಳು: ರೈತರೇ ಬದುಕಲು ಕಲಿಯಿರಿ (ನೈಸರ್ಗಿಕ ಕೃಷಿ ಕುರಿತ ಸುಭಾಷ್ ಪಾಳೇಕರ್ ಕುರಿತು) ಸಂಗೊಳ್ಳಿ ರಾಯಣ್ಣ, ತುರ್ತು ಪರಿಸ್ಥಿತಿ (ಎ. ಸೂರ್ಯ ಪ್ರಕಾಶ್ ಅವರ ‘ಎಮೆರ್ಜೆನ್ಸಿ’ ಇಂಗ್ಲಿಷ್ ಪುಸ್ತಕದ ಅನುವಾದ. ಮಲ್ಟಿ ಸ್ಟೇಟ್ ಕೋಆಪರೇಟಿವ್ ಸೊಸೈಟಿ ಅಧಿನಿಯಮ (ಅನುವಾದ) ಬರಹಗಳು, ಕತೆ, ಕವನಗಳು, ನುಡಿಚಿತ್ರಗಳು ರಾಜ್ಯದ ವಿವಿಧ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಟಿವಿ, ರೇಡಿಯೋಗಳಿಗೆ ಸ್ಕ್ರಿಪ್ಟ್, ಸಂಭಾಷಣೆ ಬರೆದಿದ್ದಾರೆ. ಸಂಭಾಷಣೆ ಬರೆದ ‘ಹರಿವು’ ಚಲನಚಿತ್ರಕ್ಕೆ 2017ರಲ್ಲಿ ಅತ್ಯುತ್ತಮ ಕನ್ನಡ ಸಿನಿಮಾ ಪ್ರಶಸ್ತಿ ಬಂದಿದೆ. ಹಲವಾರು ಟಿವಿ ಸಾಕ್ಷ್ಯಚಿತ್ರಗಳಿಗೆ ಸ್ಕ್ರಿಪ್ಟ್ ರಚಿಸಿದ್ದಾರೆ. ಕೊಪ್ಪಳದ ಬಾಲಕರ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಕೆಲ ಕಾಲ ಇಂಗ್ಲಿಷ್ ಬೋಧನೆ. ವಿವಿಧೆಡೆ ಇಂಗ್ಲಿಷ್, ವ್ಯಕ್ತಿತ್ವ ವಿಕಸನ ಹಾಗೂ ಯೋಗ ತರಗತಿಗಳ ಆಯೋಜನೆ, ಸಹಕಾರ ಸೊಸೈಟಿಗಳ ನಿರ್ವಹಣೆ ಹಾಗೂ ಮಾರ್ಗದರ್ಶನ. ಕೊಪ್ಪಳಕ್ಕೆ ಹತ್ತಿರದ ಕಿನ್ನಾಳ ಗ್ರಾಮದಲ್ಲಿ 1ರಿಂದ 7ನೇ ತರಗತಿಯ ಶಾಲೆಯ ನಿರ್ವಹಿಸುತ್ತಿದ್ದಾರೆ.