About the Author

ಸಿ.ಜಿ. ಲಕ್ಷ್ಮೀಪತಿ ಅವರು ಸದ್ಯ ಬೆಂಗಳೂರಿನ ವಿ.ಎಚ್.ಸಿ ಸೆಂಟ್ರಲ್ ಇನ್ ಸ್ಟಿಟ್ಯೂಟ್ ಆಫ್ ಹೋಮ್ ಸೈನ್ಸ್ ನಲ್ಲಿಸಮಾಜಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕರು. ಕನಕಪುರದ ರೂರಲ್ ಕಾಲೇಜು, ಕನ್ನಡ ವಿಶ್ವವಿದ್ಯಾಲಯ ಹಾಗೂ ವಿವಿಧ ಸರ್ಕಾರಿ ಪದವಿ ಕಾಲೇಜುಗಳಲ್ಲಿ ಬೋಧನಾನುಭವವಿದೆ.

ತುಮಕೂರು ಜಿಲ್ಲೆಯ ಮಧುಗಿರಿಯ ಟಿ.ವಿ.ವಿ. ಕಾಲೇಜಿನಲ್ಲಿ ಪದವಿ, ಬೆಂಗಳೂರು ವಿ.ವಿ.ಯಿಂದ ಸಮಾಜಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ, ಅಂತರ್ ಶಿಸ್ತೀಯ ಅಧ್ಯಯನಕ್ಕಾಗಿ ಹಂಪಿಯ ಕನ್ನಡ ವಿಶ್ವವಿದ್ಯಾಲಯದಿಂದ ಪಿಎಚ್ ಡಿ, ಮೈಸೂರು ಮುಕ್ತ ವಿ.ವಿ.ಯಿಂದ ಪತ್ರಿಕೋದ್ಯಮದಲ್ಲಿ ಡಿಪ್ಲೊಮಾ ಪದವೀಧರರು.

ಕೃತಿಗಳು: ಕ್ಯಾಸ್ಟ್ ಕೆಮಿಸ್ಟ್ರಿ, ಚಿತ್ರಲೆ ವೃಕ್ಷ (ಭಾರತದ ಲೈಂಗಿಕತೆಯ ಸಾಂಸ್ಕೃತಿಕ ಕಥನ), ಥಾಯ್  ಲ್ಯಾಂಡ್ ಎಂಬ ಮುಗುಳ್ನಗೆ (ಪ್ರವಾಸ ಕಥನ), ನಿಜ ಭ್ರಮೆಗಳ ರೂಪಕ (ಲೇಖನಗಳ ಸಂಗ್ರಹ), ಮತಾಂತರ ಸತ್ಯಾನ್ವೇಷಣೆ  (ಸಂಪಾದನೆ), ಕರ್ನಾಟಕದ ಸಮಾಜಶಾಸ್ತ್ರ (ಪಿಎಚ್ ಡಿ ಮಹಾಪ್ರಬಂಧದ ಪುಸ್ತಕ ರೂಪ),, ಅಂಬೇಡ್ಕರ್ ವಾದದ ಆಚರಣೆ, ಆಧುನಿಕೋತ್ತರ ಮತ್ತು ಮಾರ್ಕ್ಸ್ ವಾದೋತ್ತರ,

ಸಿ.ಜಿ. ಲಕ್ಷ್ಮೀಪತಿ