About the Author

ಕವಿ ಬಸವರಾಜ ಕರುವಿನ ಅವರು 1992 ರಲ್ಲಿ ಬಸವನಾಳು ಎಂಬ ಗ್ರಾಮದಲ್ಲಿ ನಾಗಪ್ಪ ಕರುವಿನ ಮತ್ತು ಮಂಜಮ್ಮಕೆ ಅವರ ಮಗನಾಗಿ ಜನಿಸಿದರು. ಹರಪನಹಳ್ಳಿ ತಾಲ್ಲೂಕು ವಿಜಯನಗರ ಜಿಲ್ಲೆಯವರು ಆದ ಇವರು, ತಮ್ಮ ಬಾಲ್ಯದ ಶಿಕ್ಷಣ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಬಸವನಾಳು ಎಂಬಲ್ಲಿ ಮುಗಿಸಿದರು. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಗೌರಿಪುರದಲ್ಲಿ ಹಿರಿಯ ಪ್ರಾಥಮಿಕ ಶಿಕ್ಷಣ ಪಡೆದು ನಂತರ ಪ್ರೌಢಶಾಲಾ ಶಿಕ್ಷಣವನ್ನು ಸರ್ಕಾರಿ ಪ್ರೌಢಶಾಲೆ ಹಗರಿ ಗಜಾಪುರ ಶಾಲೆಯಲ್ಲಿ ಪೂರ್ಣಗೊಳಿಸಿದರು. ಇದಾದ ಬಳಿಕ ತಮ್ಮ ಉನ್ನತ ವಿಧ್ಯಾಭ್ಯಾಸ ಪಿಯುಸಿ ಷಾ ಶೇಷಾಜಿ ಹಸ್ತಿಮಲ್ ಜೈನ್ ಪದವಿ ಪೂರ್ವ ಕಾಲೇಜು ಹರಪನಹಳ್ಳಿ ಟೌನ್ ನಲ್ಲಿ ವಿದ್ಯಾಭ್ಯಾಸ ಮಾಡಿದರು. ಡಿ. ಈಡಿ ವೃತ್ತಿ ಶಿಕ್ಷಣ ಸರ್ಕಾರಿ ಶಿಕ್ಷಕರ ತರಬೇತಿ ಸಂಸ್ಥೆ ಹೊಸದುರ್ಗ ಟೌನ್ ನಲ್ಲಿ ಯಶಸ್ವಿಯಾಗಿ ವೃತ್ತಿ ಶಿಕ್ಷಣ ತರಬೇತಿ ಮುಗಿಸಿದರು. ಬಿ. ಎ. ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹರಪನಹಳ್ಳಿ ಹಾಗೂ ಎಂ. ಎ. ದೂರ ಶಿಕ್ಷಣ ಕುವೆಂಪು ವಿಶ್ವವಿದ್ಯಾನಿಲಯದಲ್ಲಿ ವ್ಯಾಸಂಗ ಮಾಡಿದ್ದಾರೆ. ಇವರ ಪರಿಶ್ರಮ ಫಲವಾಗಿ ಸರ್ಕಾರಿ ಶಿಕ್ಷಕರ ಆಗಿ ಸೇವೆಗೆ ಸೇರಿ ಪ್ರಸ್ತುತ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಡತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇಷ್ಟೇ ಅಲ್ಲದೆ ತಾವು ಪದವಿ ವ್ಯಾಸಂಗ ಮಾಡುತ್ತಿರುವ ಸಂಧರ್ಭದಲ್ಲಿ ಕವನಗಳನ್ನು ರಚಿಸುವ ಹವ್ಯಾಸ ಬೆಳೆಸಿಕೊಂಡರು. ಆನಂತರ ಸುಮಾರು 20ಕ್ಕೂ ಹೆಚ್ಚು ಕವಿಗೋಷ್ಠಿಗಳಲ್ಲಿ ಭಾಗವಹಿಸಿದ್ದಾರೆ. ಹಾಗೆಯೇ ಅಂತರ್ಜಾಲ ಆಧಾರಿತ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಥಮ, ದ್ವಿತೀಯ, ತೃತೀಯ ಎಂಬ ಬಹುಮಾನ ಪಡೆದು ಇ ಪ್ರಮಾಣ ಪತ್ರ ಕೊಟ್ಟು ಪುರಸ್ಕರಿಸಿ ಗೌರವಿಸಲಾಗಿದೆ.

ಚೊಚ್ಚಲ ಕವನ ಸಂಕಲನ 'ಬಯಲೊಳಗಿನ ಹನಿಗಳು’

ಬಸವರಾಜ ಕರುವಿನ