ಲೇಖಕ ಬಿ ಟಿ ಮಂಜುನಾಥ ಇವರು ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲ್ಲೂಕಿನ ಬಾಗೂರು ಗ್ರಾಮದವರು. ತಂದೆ ತಿಪ್ಪೇಶಪ್ಪ ತಾಯಿ ಸಾಕಮ್ಮ. ಕುವೆಂಪು ವಿಶ್ವವಿದ್ಯಾಲಯದಿಂದ ಎಂ ಇಡಿ ಮತ್ತು ಕನ್ನಡ ಎಂ ಎ ಪದವೀಧರರು. ಆದೇ ವಿಶ್ವವಿದ್ಯಾಲಯದಿಂದ ದೇವನೂರು ಮತ್ತು ನಾಗವಾರರ ಸೃಜನಶೀಲ ಸಾಹಿತ್ಯದಲ್ಲಿ ಸಮಾಜವಾದದ ಆಶಯಗಳು ವಿಷಯವಾಗಿ ಪಿ ಹೆಚ್ ಡಿ ಪಡೆದರು. ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯರು. ವೃತ್ತಿಯಿಂದ ಶಿಕ್ಷಕರು. ಇವರ ಲೇಖನಗಳು ವಿವಿಧ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ.