About the Author

ಲೇಖಕ ಆತ್ಮಾನಂದ ಅವರು 1961 ಅಕ್ಟೋಬರ್‌ 03ರಂದು ಮಂಡ್ಯದಲ್ಲಿ ಜನಿಸಿದರು. ಪ್ರಾಥಮಿಕದಿಂದ ಪದವಿ ಪೂರ್ವದವರೆಗಿನ ಶಿಕ್ಷಣವನ್ನು ಮಂಡ್ಯದಲ್ಲಿ, ಸರ್ಕಾರಿ ಕಲಾ ಕಾಲೇಜಿನಲ್ಲಿ ಪದವಿ ಮತ್ತು ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ ಸ್ನಾತಕೋತ್ತರ ಪದವಿ ಪೂರೈಸಿದರು. ‘ಕನ್ನಡ ಸಾಹಿತ್ಯದಲ್ಲಿ ಪರಕೀಯತೆಯ ಪ್ರತಿನಿಧಿಕರಣ' ಎಂಬ ಪ್ರೌಢ ಪ್ರಬಂಧಕ್ಕೆ ಬೆಂಗಳೂರು ವಿಶ್ವವಿದ್ಯಾನಿಲಯದಿಂದ ಡಾಕ್ಟರೇಟ್ ಪದವಿ ಪಡೆದಿದ್ದಾರೆ. ಪ್ರಸ್ತುತ ಬೆಂಗಳೂರಿನ ಎನ್. ಎಂ. ಕೆ. ಆರ್. ವಿ. ಮಹಿಳಾ ಕಾಲೇಜಿನಲ್ಲಿ ಕನ್ನಡ ವಿಭಾಗದ ಮುಖ್ಯಸ್ಥರಾಗಿದ್ದಾರೆ. ನನ್ನೊಳಗಿನ ಅಪ್ಪ (ಆತ್ಮಕಥೆ) ಅವರ ಚೊಚ್ಚಲ ಕೃತಿ.

ಆತ್ಮಾನಂದ

(03 Oct 1961)