ಕವಿ ಅನ್ನಪೂರ್ಣ ಯನ್.ಕೆ. ಅವರು ಗಡಿನಾಡು ಕಾಸರಗೋಡು ಜಿಲ್ಲೆಯ ಮಂಜೇಶ್ವರ ತಾಲೂಕಿನ ಪಡೆ ವಾಣೀನಗರದ ಕುತ್ತಾಜೆಯವರು. ನಾಗರಾಜ ಕಡಂಬಳಿತ್ತಾಯ ವಸಂತ ಕುಮಾರಿ ದಂಪತಿಗಳ ಮಗಳಾಗಿ 09-01-2002ರಲ್ಲಿ ಜನಿಸಿದರು. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಪಡೆ, ವಾಣೀನಗರದಲ್ಲಿ ಪೂರೈಸಿ, ಪದವಿಪೂರ್ವ ಶಿಕ್ಷಣವನ್ನು ಅಡ್ಯನಡ್ಕದ ಜನತಾ ಪದವಿಪೂರ್ವ ಕಾಲೇಜು ಮುಗಿಸಿ ಪ್ರಸ್ತುತ ಪುತ್ತೂರಿನ ವಿವೇಕಾನಂದ ಮಹಾವಿದ್ಯಾಲಯದಲ್ಲಿ ತೃತೀಯ ಬಿಎಸ್ಸಿ ಪದವಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಸಾಹಿತ್ಯ ಕ್ಷೇತ್ರದಲ್ಲಿ ಆಸಕ್ತಿ ಹೊಂದಿರುವ ಇವರು ಹಲವಾರು ಕವನ, ಕಥೆ, ಲೇಖನಗಳನ್ನು ಬರೆದಿದ್ದಾರೆ. ಇವರ ಬರಹಗಳು ಕಾರವಲ್ ಅಮರ ಸುದ್ದಿ, ನೇಸರ, ಜಾಗೃತಿ ಹಾಗೂ ವಿಕಾಸ ಮುಂತಾದ ಪತ್ರಿಕೆಗಳಲ್ಲಿ ಪ್ರಕಟಗೊಂಡಿದೆ. ಹಲವು ಕವಿತಾ ಸ್ಪರ್ಧೆ, ಪ್ರಬಂಧ ಸ್ಪರ್ಧೆಗಳಲ್ಲಿ ಬಹುಮಾನ ಪಡೆದಿದ್ದಾರೆ. ತಾಲೂಕು, ಜಿಲ್ಲಾ ಮಟ್ಟದ ಹಲವಾರು ಕವಿಗೋಷ್ಠಿಗಳಲ್ಲಿ ಭಾಗವಹಿಸಿರುವ ಇವರ ಕವನಗಳು ಪುತ್ತೂರಿನ ಪಾಂಚಜನ್ಯ ರೇಡಿಯೋ ಕೇಂದ್ರದಲ್ಲೂ ಪ್ರಸಾರವಾಗಿದೆ.