About the Author

ಅಜಮೀರ ನಂದಾಪುರ ಅವರು ಜನಿಸಿದ್ದು 1972 ಜೂನ್‌ 1ರಂದು. ಮೂಲತಃ ಗಂಗಾವತಿಯ ಕನಕಗಿರಿಯವರಾದ ಇವರು ಜನತಾ ಸೇವಾ ಅನುದಾನಿಕ ಕನ್ನಡ ಮಾಧ್ಯಮ ಪ್ರೌಢಶಾಲಾ ಮುಖ್ಯೋಪಾಧ್ಯಾಯರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ತಂದೆ ಶ್ಯಾಮೀದಸಾಬ ನಂದಾಪುರ,ತಾಯಿ ಹೊನ್ನುರುಬಿ.

ಬಿ,ಎ, ಬಿ,ಎಡ್, ಹಾಗೂ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಸಾಹಿತ್ಯದ ಬಗ್ಗೆ ಅತೀವ ಆಸಕ್ತಿ ಇದ್ದ ಇವರು ಸಾಹಿತ್ಯ ಕೃಷಿಯಲ್ಲಿಯೂ ತೊಡಗಿಸಿಕೊಂಡಿದ್ದಾರೆ. ಹಲವಾರು ದಿನಪತ್ರಿಕೆಗಳಲ್ಲಿ ಅಂಕಣ ಬರಹಗಳನ್ನು ಬರೆದಿರುವ ಇವರ ಪ್ರಮುಖ ಕೃತಿಗಳೆಂದರೆ ಹುಚ್ಚು ಮನಸ್ಸುಗಳು ಕವನ ಸಂಕಲನ, ತರ್ಲೆ ತಿಮ್ಮನ ಗಾಂಧಿ ಹೌಸ್, ತರ್ಲೆ ತಿಮ್ಮನ ಭಿ ಪಾರ್ಮ್ ಲಲಿತ ಪ್ರಬಂಧ ಮುಂತಾದವು. ಇವರಿಗೆ ಕೊಪ್ಪಳ ಜಿಲ್ಲಾಢಳಿತದಿಂದ ಉತ್ತಮ ಜಿಲ್ಲಾ ಸಂಪನ್ಮೂಲ ವ್ಯಕ್ತಿ, ಬಸವ ಜ್ಯೋತಿ ರಾಜ್ಯ ಪುರಸ್ಕಾರ ಲಭಿಸಿದೆ. ಇವರು ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಅಧ್ಯಕ್ಷರಾಗಿದ್ದಾರೆ. 

ಅಜಮೀರ ನಂದಾಪುರ

(01 Jun 1972)

Awards