ಮಂಡ್ಯಜಿಲ್ಲೆ ನಾಗಮಂಗಲ ತಾಲ್ಲೂಕಿನ ರಾಮಣ್ಣ ಪುಟ್ಟಮ್ಮ ದಂಪತಿಗಳ ಪುತ್ರಿ ಅಭಿಜ್ಞಾ ಪಿ ಎಮ್ ಗೌಡ. ವೃತ್ತಿಯಲ್ಲಿ ಶಿಕ್ಷಕರಾಗಿ ನಾಗಮಂಗಲದಲ್ಲೆ ಕಾರ್ಯ ನಿರ್ವಹಿಸುತ್ತಿದ್ದಾರೆ ವಿದ್ಯಾಭ್ಯಾಸ ಬಿಎಡ್.ಎಮ್ ಎ ಸ್ನಾತಕೋತರ ಪದವಿಧರೆ.ಸ್ನಾತಕೋತರ ಪದವಿಯಲ್ಲಿ ಮೈಸೂರು ವಿದ್ಯಾನಿಲಯದಲ್ಲಿ ರಾಜ್ಯಶಾಸ್ರ್ತ ಮತ್ತು ಕನ್ನಡ ಮಾಡಿದ್ದಾರೆ.. ಮೊದಲಿನಿಂದಲೂ ಓದುವ ಹವ್ಯಾಸ ಹೊಂದಿದ್ದ ಹಾಗೂ ವಿದ್ಯಾರ್ಥಿದೆಸೆಯಲ್ಲಿ ಪ್ರಬಂಧ ಹಾಗು ಲೇಖನಗಳನ್ನು ಬರೆಯುವ ಹವ್ಯಾಸ ಹೊಂದಿದ್ದ ಇವರು ಕವನಗಳಲ್ಲಿ ಛಂದೋಬದ್ಧವಾಗಿ ಹತ್ತು ಹಲವು ಪ್ರಯೋಗಗಳಲ್ಲಿ ಬರೆದಿರುವರು. ಷಟ್ಪದಿಗಳು 200 ಕ್ಕೂ ಹೆಚ್ಚು ಬರಹಗಳು.ಚತುಶ್ರಯಲಯ ಏಳೆ ,ಸೌರಾಸ್ರ್ಟ ,ತ್ರಿವುಡೆ , ಅಕ್ಕರಿಕೆಗಳು ,ರಗಳೆಗಳು ,ವೃತ್ತಗಳಲ್ಲಿ ಸಾಕಷ್ಟು ಕವನಗಳನ್ನ ಬರೆದಿರುವೆ.ಅಲಂಕಾರಕೆ ಸಂಬಂಧಿಸಿದಂತೆ ವೃತ್ತಾನುಪ್ರಾಸ ಛೇಕಾನು ಪ್ರಾಸ ಚಿತ್ರಕವಿತ್ವ ಹಾಗು ಶ್ಲೇಷಾಲಂಕಾರಕ್ಕೂ ಸಂಬಂಧಿಸಿದ ಕವನಗಳನ್ನು ಬರೆದಿರುವರು.450 ಕ್ಕೂ ಹೆಚ್ಚು ಗಝಲ್ಗಳನ್ನು ಸಹ ಬರೆದಿದಿದ್ದಾರೆ. ಇವಲ್ಲದೆ ಕಥೆ , ನ್ಯಾನೋಕತೆ ,ಹಾಸ್ಯಕಥೆ ,ಪ್ರಬಂಧಗಳು, ಲೇಖನಗಳನ್ನು ಬರೆದಿರುವೆ.ಇದರ ಜೊತೆಗೆ ರುಬಾಯಿ ,ಟಂಕ ,ಹಾಯ್ಕು ,ಚುಟುಕು , ಹನಿಗವನ ಹೀಗೆ ಬರವಣಿಗೆಯಲ್ಲಿ ನನ್ನನ್ನ ನಾ ತೊಡಗಿಸಿಕೊಂಡು ಸುಮಾರು ಮೂರು ಸಾವಿರಕ್ಕೂ ಹೆಚ್ಚು ಬರಹವನ್ನು ಬರೆದಿದ್ದಾರೆ.
ಕೃತಿಗಳು: ಕಾನನದ ಅರಸಿ, ನೆಲಸಿರಿಯ ಮಣಿಗಳು ಶಿಶು ಸಾಹಿತ್ಯ, ಅಭಿಭಾವನ ಭಾವಗೀತೆ ಸಂಕಲನ, ಎದೆಯ ತೇರಿನೊಳ್ ಗಝಲ್ ಈ ನಾಲ್ಕು ಕವನ ಸಂಕಲನ ಬಿಡುಗಡೆಯಾಗಿವೆ.
ಪ್ರಶಸ್ತಿಗಳು: ಸಾಹಿತ್ಯ ಸಿಂಧು ಪ್ರಶಸ್ತಿ, ಜನ್ನಕಾವ್ಯ ಪ್ರಶಸ್ತಿ, ಶತಶೃಂಗ ಪ್ರಶಸ್ತಿ