ಕರ್ನಾಟಕ ಲೇಖಕಿಯರ ಸಂಘದ ವಿವಿಧ ದತ್ತಿನಿಧಿ ಪ್ರಶಸ್ತಿಗಳಿಗಾಗಿ ಕೃತಿಗಳ ಆಹ್ವಾನ

Date: 09-05-2024

Location: ಬೆಂಗಳೂರು


ಬೆಂಗಳೂರು: ಕರ್ನಾಟಕ ಲೇಖಕಿಯರ ಸಂಘದ ವಿವಿಧ ದತ್ತಿನಿಧಿಗಳ ಪ್ರಶಸ್ತಿಗಳಿಗಾಗಿ ಲೇಖಕಿಯರಿಂದ ಕೃತಿಗಳನ್ನು ಆಹ್ವಾನಿಸಿದೆ. ಪ್ರಶಸ್ತಿಗಳು ನಗದು ಹಾಗೂ ಪ್ರಶಸ್ತಿ ಫಲಕಗಳನ್ನು ಹೊಂದಿದ್ದು, ಆ ಯ್ಕೆಯಾದ ಕೃತಿಗಳಿಗೆ ಜೂನ್ 23- 2024 ರಂದು ಭಾನುವಾರ ಬೆಳಿಗ್ಗೆ 10.00 ಗಂಟೆಗೆ ಕಲಾಕ್ಷೇತ್ರದ ನಯನ ಸಭಾಂಗಣದಲ್ಲಿ ನಡೆಯಲಿರುವ ಸಮಾರಂಭದಲ್ಲಿ ಪ್ರದಾನ ಮಾಡಲಾಗುವುದು ಎಂದು ಸಂಘದ ಅಧ್ಯಕ್ಷರಾದ ಡಾ. ಎಚ್.ಎಲ್.ಪುಷ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಾಕೋಳು ಸರೋಜಮ್ಮ(ಕಾದಂಬರಿ), ಭಾಗ್ಯ ನಂಜಪ್ಪ (ವಿಜ್ಞಾನ ಸಾಹಿತ್ಯ,), ನಾಗರತ್ನ ಚಂದ್ರಶೇಖರ್ (ಲಲಿತ ಪ್ರಬಂಧ), ಜಿ.ವಿ. ನಿರ್ಮಲ (ಭಾರತದ ಯಾವುದೇ ಭಾಷೆಯ ಅನುವಾದಿತ ಕಾದಂಬರಿ/ ಕಥಾ ಸಂಕಲನ/ ಜೀವನ ಚರಿತ್ರೆ), ತ್ರಿವೇಣಿ ಸಾಹಿತ್ಯ ಪುರಸ್ಕಾರ( ಪ್ರಾಯೋಜಕರು - ಸುಧಾಮೂರ್ತಿ- ಸಣ್ಣಕಥೆ/ ಕಾದಂಬರಿ), ಕಮಲಾ ರಾಮಸ್ವಾಮಿ (ಪ್ರವಾಸ ಸಾಹಿತ್ಯ), ನುಗ್ಗೆಹಳ್ಳಿ ಪಂಕಜ (ಹಾಸ್ಯ ಕೃತಿ),ಗುಣಸಾಗರಿ ನಾಗರಾಜ್ (ಮಕ್ಕಳ ಸಾಹಿತ್ಯ.),ಇಂದಿರಾ ವಾಣಿರಾವ್ (ನಾಟಕ), ಜಯಮ್ಮ ಕರಿಯಣ್ಣ (ಸಂಶೋಧನೆ), ತ್ರಿವೇಣಿ ದತ್ತಿನಿಧಿ ( ಕಥೆ/ ಕಾದಂಬರಿ- ಪ್ರಥಮ, ದ್ವಿತೀಯ, ತೃತೀಯ) - ಪ್ರಥಮ, ದ್ವಿತೀಯ ಬಹುಮಾನ, ತೃತೀಯ, ಉಷಾ. ಪಿ. ರೈ ( ಕವನ ಸಂಕಲನ )- (2020- 2021- 2022 ಈ ಮೂರು ವರ್ಷಗಳಲ್ಲಿ ಪ್ರಕಟಗೊಂಡ ಕವನ ಸಂಕಲನ), ನಿರುಪಮಾ ದತ್ತಿ ಪ್ರಶಸ್ತಿಗೆ ಡಿಜಿಟಲ್ ಮಾಧ್ಯಮದಲ್ಲಿ ಪ್ರಕಟಗೊಂಡ ಕಥೆಗಳು ಅಥವಾ ಮುದ್ರಣ ಮಾಧ್ಯಮದಲ್ಲಿ ಪ್ರಕಟಗೊಂಡ ಕಥೆಗಳನ್ನು ಕಳುಹಿಸಬಹುದು.

ನಿಯಮಗಳು ಹೀಗಿವೆ;

* ದತ್ತಿ ಬಹುಮಾನಕ್ಕಾಗಿ ಲೇಖಕಿಯರು, ಸಾಹಿತ್ಯಾಸಕ್ತರು ಮೇಲೆ ಸೂಚಿಸಿರುವ ಯಾವುದೇ ಪ್ರಕಾರಗಳಿಗೆ ಕೃತಿಗಳನ್ನು ಕಳುಹಿಸಬಹುದು. ಬಹುಮಾನಕ್ಕಾಗಿ ಕಳುಹಿಸುವ ಕೃತಿಗಳೊಂದಿಗೆ ಈ ಕೆಳಕಂಡ ವಿವರಗಳನ್ನುಳ್ಳ ಪತ್ರವನ್ನು ಕಳುಹಿಸಬೇಕು.

* ಲೇಖಕಿಯರ ಹೆಸರು, ಅಂಚೆವಿಳಾಸ, ಫೋನ್ ನಂ. ಇಮೇಲ್ ವಿಳಾಸ, ಕೃತಿ ಶೀರ್ಷಿಕೆ, ಪ್ರಕಟಣೆ ವರ್ಷ ಬರೆಯಬೇಕು.

* ಕೃತಿಗಳ ಮೇಲೆ ಆಯಾ ದತ್ತಿನಿಧಿಯ ಹೆಸರು ಬರೆಯಬೇಕು.

* ಲೇಖಕಿಯರು ತಮ್ಮ 3 ಕೃತಿಗಳನ್ನು ಕಳುಹಿಸಬೇಕು.

* ಈಗಾಗಲೇ ಎರಡು ಪುಸ್ತಕ ಬಹುಮಾನ ಪಡೆದ ಲೇಖಕರ ಕೃತಿಗಳನ್ನು ಬಹುಮಾನಕ್ಕಾಗಿ ಪರಿಗಣಿಸಲಾಗುವುದಿಲ್ಲ.

* ಸಂಪಾದಿತ ಕೃತಿಗಳನ್ನು ಹಾಗೂ ಪಿ.ಎಚ್.ಡಿ. ಪ್ರಬಂಧಗಳನ್ನು ಬಹುಮಾನಕ್ಕಾಗಿ ಪರಿಗಣಿಸಲಾಗುವುದಿಲ್ಲ.

* ಬಹುಮಾನಕ್ಕೆ ಲೇಖಕಿಯರ ಕೃತಿಗಳನ್ನು ಮಾತ್ರ ಪರಿಗಣಿಸಲಾಗುವುದು. ಕೃತಿಯ ಪ್ರಥಮ ಆವೃತ್ತಿಯನ್ನು ಮಾತ್ರ ಪರಿಗಣಿಸಲಾಗುವುದು.

* ಪ್ರತಿ ಪುಸ್ತಕ ಬಹುಮಾನ ಆಯ್ಕೆ ಸಮಿತಿಯಲ್ಲಿ ಮೂವರು ಖ್ಯಾತ ಸಾಹಿತಿಗಳು ಇರುತ್ತಾರೆ. ಅವರು ನೀಡಿದ ತೀರ್ಪಿನ ಪ್ರಕಾರ ಕೃತಿಯನ್ನು ಬಹುಮಾನಕ್ಕಾಗಿ ಪರಿಗಣಿಸಲಾಗುವುದು.

* ಕರ್ನಾಟಕ ಲೇಖಕಿಯರ ಸಂಘ ದತ್ತಿನಿಧಿ ಪುಸ್ತಕ ಬಹುಮಾನ ವಿತರಣೆ ಸಮಾರಂಭದಲ್ಲಿ ಬಹುಮಾನ ಪಡೆದ ಕೃತಿಗಳ ಲೇಖಕಿಯರನ್ನು ಗೌರವಿಸಿ ಬಹುಮಾನ ನೀಡಲಾಗುವುದು.

* ದಯವಿಟ್ಟು ಕೃತಿಗಳನ್ನು ದಿ. 23.05.2024 (ಮೇ 23) ರ ಒಳಗೆ ನಮಗೆ ತಲುಪುವಂತೆ ಈ ಕೆಳಕಂಡ ವಿಳಾಸಕ್ಕೆ ಕಳುಹಿಸುವುದು. ತಡವಾಗಿ ಬಂದ ಕೃತಿಗಳನ್ನು ಪರಿಗಣಿಸಲಾಗುವುದಿಲ್ಲ.

* ಕೃತಿಗಳು ತಲುಪಬೇಕಾದ ವಿಳಾಸ: ಕರ್ನಾಟಕ ಲೇಖಕಿಯರ ಸಂಘ (ರಿ) ಬೆಂಗಳೂರು, 206, 2ನೇ ಮಹಡಿ, ವಿಜಯ ಮ್ಯಾನ್ ಶನ್, 2ನೇ ತಿರುವು, 2ನೇ ಮುಖ್ಯರಸ್ತೆ, ಚಾಮರಾಜಪೇಟೆ ಬೆಂಗಳೂರು -560018

 

MORE NEWS

ಬರವಣಿಗೆಗೆ ಅನುಭವ ಎಷ್ಟು ಮುಖ್ಯವೋ ಅಧ್ಯಯನವೂ ಅಷ್ಟೇ ಮುಖ್ಯ: ಬರಗೂರು ರಾಮಚಂದ್ರಪ್ಪ

18-05-2024 ಬೆಂಗಳೂರು

ಬೆಂಗಳೂರು: ಇಲ್ಲಿ ಬಿಡುಗಡೆಗೊಂಡ ಮೂರು ಪುಸ್ತಕಗಳು ವಿಭಿನ್ನ ವಿಚಾರಗಳನ್ನು ಒಳಗೊಂಡಿದ್ದರೂ, ಅವೆಲ್ಲವೂ ಸಾಮಾಜಿಕ ಕಾಳಜಿಯ...

ಕನ್ನಡ ಸಾಹಿತ್ಯ ಪರಿಷತ್ತು ನೀಡುವ ದತ್ತಿನಿಧಿ ರಾಜ್ಯ ಪ್ರಶಸ್ತಿಗಳಿಗೆ ಆಹ್ವಾನ 

18-05-2024 ಬೆಂಗಳೂರು

ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತು ನೀಡುವ 2023ನೇ ಸಾಲಿನಲ್ಲಿ ಪ್ರಕಟವಾದ ಕನ್ನಡ ಪುಸ್ತಕಗಳಿಗೆ ಕನ್ನಡ ಸಾಹಿತ್ಯ ಪರಿ...

ಅನುಪಮಾ ನಿರಂಜನ ಅವರ ಬಗ್ಗೆ ಓದಿ ತಿಳಿದುಕೊಳ್ಳುವುದು ಬಹಳಷ್ಟಿದೆ; ಎಚ್.ಎಲ್. ಪುಷ್ಟ

17-05-2024 ಬೆಂಗಳೂರು

ಬೆಂಗಳೂರು: ಕನ್ನಡ ಸಂಘರ್ಷ ಸಮಿತಿಯಿಂದ ಡಾ. ಅನುಪಮಾ ನಿರಂಜನ ಹುಟ್ಟು ಹಬ್ಬದ ಪ್ರಯುಕ್ತ ಪ್ರಶಸ್ತಿ ಪ್ರದಾನ ಹಾಗೂ ರಾಜ್ಯ ...