ಅನುಪಮಾ ನಿರಂಜನ ಅವರ ಬಗ್ಗೆ ಓದಿ ತಿಳಿದುಕೊಳ್ಳುವುದು ಬಹಳಷ್ಟಿದೆ; ಎಚ್.ಎಲ್. ಪುಷ್ಟ

Date: 17-05-2024

Location: ಬೆಂಗಳೂರು


ಬೆಂಗಳೂರು: ಕನ್ನಡ ಸಂಘರ್ಷ ಸಮಿತಿಯಿಂದ ಡಾ. ಅನುಪಮಾ ನಿರಂಜನ ಹುಟ್ಟು ಹಬ್ಬದ ಪ್ರಯುಕ್ತ ಪ್ರಶಸ್ತಿ ಪ್ರದಾನ ಹಾಗೂ ರಾಜ್ಯ ಮಟ್ಟದ ಕಥಾ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಣಾ ಕಾರ್ಯಕ್ರಮವನ್ನು ನಗರದ ಬಿ.ಎಂ.ಶ್ರೀ ಪ್ರತಿಷ್ಠಾನದಲ್ಲಿ 2024 ಮೇ 17 ಶುಕ್ರವಾರದಂದು ಹಮ್ಮಿಕೊಳ್ಳಲಾಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ, ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ಡಾ.ಎಚ್.ಎಲ್. ಪುಷ್ಪ ಮಾತನಾಡಿ, "ಕನ್ನಡ ಸಂಘರ್ಷ ಸಮಿತಿಯು ಕನ್ನಡ ಜನಪರ ಹೋರಾಟದಂತಹ ವಿಚಾರಗಳಿಂದ ಗುರುತಿಸಿಕೊಂಡಿದೆ. ಕನ್ನಡದ ಕವಿಗಳಿಗೆ ಸಂಬಂಧ ಪಟ್ಟ ಹಾಗೆ ಕಾರ್ಯಕ್ರಮಗಳನ್ನು ಮಾಡುವುದು, ಪ್ರಶಸ್ತಿ ಪ್ರದಾನ ಮಾಡುವುದು ಕನ್ನಡದ ಓದುಗ ಪರಂಪರೆಯನ್ನು ಬೆಳೆಸುವ ನಿಟ್ಟಿನಲ್ಲಿ ಸಾಹಿತ್ಯವನ್ನು ಪಸರಿಸುವಂತಹ ಕಾರ್ಯವನ್ನು ಈ ಸಂಸ್ಥೆಯು ಮಾಡುತ್ತಿದೆ. ಇನ್ನು ಅನುಪಮಾ ನಿರಂಜನ ಅವರ ಬಗ್ಗೆ ಓದಿ ತಿಳಿದುಕೊಳ್ಳುವುದು ಬಹಳಷ್ಟಿದೆ. ಒಂದು ಕಾಲದಲ್ಲಿ ಜನಪ್ರಿಯ ಪ್ರಕಾರದಲ್ಲಿ ಅನುಪಮಾ ನಿರಂಜನ ಅವರು ಬರೆಯಲು ಶುರುಮಾಡಿದ್ದು, ನಂತರದಲ್ಲಿ ತಮ್ಮ ಎರಡನೇಯ ಕಾಲಘಟ್ಟದಲ್ಲಿ ಕಾದಂಬರಿಗಳನ್ನು ಬರೆಯಲು ಶುರುಮಾಡಿದರು. ಅವರ ‘ಮಾಧವಿ’ ಕಾದಂಬರಿ ನನಗೆ ಬಹಳ ಇಷ್ಟವಾಗಿತ್ತು," ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿರಿಯ ಲೇಖಕಿ, ವಿಮರ್ಶಕಿ ವರದಾ ಶ್ರೀನಿವಾಸ ಅವರು ವಹಿಸಿದ್ದರು.

ಹಿರಿಯ ಪತ್ರಕರ್ತ, ಹೋರಾಟಗಾರ ರಾಮಣ್ಣ ಎಚ್. ಕೋಡಿಹೊಸಹಳ್ಳಿ ಬಹುಮಾನವನ್ನು ವಿತರಿಸಿದರು.

ಕನ್ನಡ ಸಂಘರ್ಷ ಸಮಿತಿಯ ಅಧ್ಯಕ್ಷ ಎ.ಎಸ್. ನಾಗರಾಜಸ್ವಾಮಿ ಆಶಯ ನುಡಿಗಳನ್ನಾಡಿದರು.

 

 

MORE NEWS

ಲೇಖಕಿಯರ ಬಗೆಗೆ ಚರ್ಚೆ ನಡೆಯುವುದಿಲ್ಲ ಎನ್ನುವುದು ವೈದೇಹಿ ಅವರ ಮಟ್ಟಿಗೆ ಸುಳ್ಳಾಗಿದೆ; ಆಶಾದೇವಿ

02-06-2024 ಬೆಂಗಳೂರು

ಬೆಂಗಳೂರು: ವೈದೇಹಿ ಅಭಿಮಾನಿಗಳ ಬಳಗದಿಂದ ವೈದೇಹಿ ಸಾಹಿತ್ಯ ಮೂರು ಪುಸ್ತಕಗಳ ಚಿಂತನ ಮಂಥನ ಕಾರ್ಯಕ್ರಮವು 2024 ಜೂನ್ 02 ...

​​​​​​​ಸಮಾಜದಲ್ಲಿರುವ ಅಸಮಾನತೆಯನ್ನು ಅರ್ಥಮಾಡಿಕೊಳ್ಳಲು ಈ ಕೃತಿ ಸಹಕಾರಿ

02-06-2024 ಬೆಂಗಳೂರು

ಬೆಂಗಳೂರು: ಉತ್ಪಾದನೆ, ಸರಕು, ಬಂಡಾವಳ ಎಂದರೇನು ಎಂಬುದರ ಬಗ್ಗೆ ಮಾರ್ಕ್ಸ್ ಮುಖಾಂತರ ತಿಳಿದುಕೊಳ್ಳುವ ಪ್ರಯತ್ನ ಆಗಬೇಕು ...

ಜಾನಪದ ವಿದ್ವಾಂಸ, ಸಾಹಿತಿ ಎಂ.ಜಿ. ಈಶ್ವರಪ್ಪ ನಿಧನ

01-06-2024 ಬೆಂಗಳೂರು

ಹಿರಿಯ ಸಾಹಿತಿ, ಶಿಕ್ಷಣ ತಜ್ಞ, ಜಾನಪದ ವಿದ್ವಾಂಸರಾದ ಎಂ.ಜಿ. ಈಶ್ವರಪ್ಪ(74) ಅವರು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ...