ದಿ ಆರ್ಟಿಸ್ಟ್

Author : ಸುಭಾಷ್ ರಾಜಮಾನೆ

Pages 72

₹ 60.00




Year of Publication: 2016
Published by: ವಂಶಿ ಪಬ್ಲಿಕೇಷನ್ಸ್,
Address: ವಂಶಿ ಪಬ್ಲಿಕೇಷನ್ಸ್, ಗಾಯತ್ರಿ ಕಾಂಪ್ಲೆಕ್ಸ್, ಟಿ. ಬಿ ಬಸ್ ನಿಲ್ದಾಣದ ಬಳಿ,ಬಿ.ಎಚ್. ರಸ್ತೆ, ನೆಲಮಂಗಲ, ಬೆಂಗಳೂರು – 562123
Phone: 9743055511

Synopsys

’ದಿ ಆರ್ಟಿಸ್ಟ್’ ಎನ್ನುವುದು ಸಿನೆಮಾ ಹೆಸರು.  ಐದು ಆಸ್ಕರ್‍ ಪುರಸ್ಕಾರಗಳನ್ನು ಪಡೆದ ಮೂಕಿ ಸಿನೆಮಾದ ರಚನೆ ಮೈಕೆಲ್ ಹಜನವಿಸಿಯಸ್. ಇಂತಹ ಪ್ರಸಿದ್ದ ಫ್ರೆಂಚ್ ಭಾಷೆಯ ಮೂಕಿ ಸಿನಿಮಾದ ಚಿತ್ರಕತೆಯನ್ನು ಕನ್ನಡಕ್ಕೆ ಅನುವಾದ ಮಾಡಿದವರು ಡಾ. ಸುಭಾಷ್ ರಾಜಮಾನೆ.

ಲೋಕ ಪ್ರಸಿದ್ಧಿಯ ಚಿತ್ರಗಳಲ್ಲಿ ಒಂದಾದ ’ದಿ ಆರ್ಟಿಸ್ಟ್’ 2011 ರಲ್ಲಿ ತಯಾರಾದ ಫ್ರೆಂಚ್ ಭಾಷೆಯ ಮೂಕಿಚಿತ್ರ. ಅದೇ ವರ್ಷದಲ್ಲಿ ಐದು ಆಸ್ಕರ್‍ ಗಳಿಸಿದ ಈ ಚಿತ್ರ ಜನಪ್ರಿಯವಾದದ್ದು. ಮುಖ್ಯವಾಗಿ ಈ ಚಿತ್ರವು ನಾಯಕ ನಟ ನಟಿಯೊಬ್ಬಳ ಬೆಳವಣಿಗೆಗೆ ನೆರವಾಗಿ, ಅವಳು ಬೆಳೆಯುತ್ತಾ ಹೋದಂತೆ ಆ ನಟ ಚಿತ್ರರಂಗದಲ್ಲಿ ಕೊರತೆ ಹೊಂದುವುದನ್ನು ಅನಾವರಣಗೊಳಿಸಲಾಗಿದೆ.

ಈ ಪುಸ್ತಕವು ಸಿನೆಮಾ ಸಾಹಿತ್ಯದ ನಿರ್ಮಾಣದ ಗರಿಯನ್ನು ಹೆಚ್ಚಿಸುವಂತೆ ಮಾಡಿದೆ. ಓದುಗ, ಪ್ರೇಕ್ಷಕರಿಗೆ ಅಗತ್ಯ ಇರುವ ಸಾಹಿತ್ಯ ದೊರಕಿಸಿಕೊಡುವಂತಾಗಿದೆ.

About the Author

ಸುಭಾಷ್ ರಾಜಮಾನೆ
(01 June 1980)

ಯಲಹಂಕ ಪದವಿ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕ ಆಗಿರುವ ಸುಭಾಷ ರಾಜಮಾನೆ ಅವರು ಮೂಲತಃ ಬೆಳಗಾವಿಯವರು. ಧಾರವಾಡದ ಕರ್ನಾಟಕ ಕಾಲೇಜಿನ ವಿದ್ಯಾರ್ಥಿಯಾಗಿ ಪದವಿ ಪಡೆದ ಅವರು ನಂತರ ಬೆಂಗಳೂರು ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಪಡೆದರು. ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ರಹಮತ್ ತರೀಕೆರೆ ಅವರ ಮಾರ್ಗದರ್ಶನದ ಕನ್ನಡ ವಿಮರ್ಶೆ ಕುರಿತು ಅಧ್ಯಯನ ನಡೆಸಿ ಪಿಎಚ್.ಡಿ.ಪದವಿ ಗಳಿಸಿದರು. ಕನ್ನಡ ಇಂಗ್ಲಿಷ್‌, ಮರಾಠಿ, ಹಿಂದಿ ಭಾಷೆಗಳಲ್ಲಿ ಉತ್ತಮ ಗತಿ ಇರುವ ಸುಭಾಷ ಅವರಿಗೆ ಸಿನಿಮಾ-ಸಾಹಿತ್ಯ ಅಚ್ಚುಮೆಚ್ಚು. ಸಿನಿಮಾ ಬಗ್ಗೆ ಗಂಭೀರ ಅಧ್ಯಯನ ನಡೆಸುತ್ತಿರುವ ಅವರು ದಿ ಆರ್ಟಿಸ್ಟ್‌ ಸಿನಿಮಾದ ಚಿತ್ರಕತೆಯನ್ನು ಕನ್ನಡೀಕರಿಸಿ ಪ್ರಕಟಿಸಿದ್ದಾರೆ.  ...

READ MORE

Related Books