Book Watchers

ತಮ್ಮಣ್ಣ ಬೀಗಾರ

ಮಕ್ಕಳ ಸಾಹಿತಿ ತಮ್ಮಣ್ಣ ಬೀಗಾರ ಅವರು 1959 ನವೆಂಬರ 22 ರಂದು ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಬೀಗಾರ ಗ್ರಾಮದಲ್ಲಿ ಜನಿಸಿದರು. ಸ್ನಾತಕೋತ್ತರ ಪದವೀಧರರು. ವೃತ್ತಿಯಿಂದ ಶಿಕ್ಷಕರು. ಪ್ರಸ್ತುತ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಸರಕಾರಿ ಹಿರಿಯ ಪ್ರಾಥಮಿಕ ಬಿದ್ರಕಾನ ಶಾಲೆಯಲ್ಲಿ ಮುಖ್ಯೋಪಾಧ್ಯಯರಾಗಿ ಪ್ರಸ್ತುತ ನಿವೃತ್ತಿ ಹೊಂದಿದ್ದಾರೆ. ಗುಬ್ಬಚ್ಚಿ ಗೂಡು, ಚಿಂವ್ ಚಿಂವ್, ಜೀಕ್ ಜೀಕ್, ಪುಟಾಣಿ ಪುಡಿಕೆ, ಸೊನ್ನೆ ರಾಶಿ ಸೊನ್ನೆ, ತೆರೆಯಿರಿ ಕಣ್ಣು ಖುಷಿಯ ಬೀಜ ಹಾಗೂ ಹಾಡಿನ ಹಕ್ಕಿ - ಮಕ್ಕಳ ಕವನ ಸಂಕಲನ. ಮಿಂಚಿನ ಮರಿ - ಶಿಶುಪ್ರಾಸ ಹೊತ್ತಿಗೆ ಕಪ್ಪೆಯ ಪಯಣ, ಜಿಂಕೆಮರಿ, ಹಸಿರೂರಿನ ಹುಡುಗ, ಮಲ್ಕಾಡೆ ಮಾತಾಡು, ಅಮ್ಮನ ಚಿತ್ರ ಪುಟ್ಟನ ಕೋಳಿ ಅವರ ಮಕ್ಕಳ ಕತಾ ಸಂಕಲನ.

Articles

ಪರಿಸರ ಪ್ರೀತಿಯೊಂದಿಗೆ ಮಕ್ಕಳ ಪ್ರೀತಿ ‘ಹಸಿರುಡುಗೆ’

ಮಕ್ಕಳು ಗಿಡ ನೆಡಲು ಮುಂದಾಗುವ ಪ್ರಸಂಗವೂ ಬಂದಿದೆ. ಅವರು ನೆಟ್ಟಿದ್ದ ಗಿಡಗಳು ಮಾಯವಾಗಿದ್ದನ್ನು ನೋಡಿ ಮಕ್ಕಳು ಚಿಂತಿತರಾಗುತ್ತಾರೆ. ಅದೇ ವೇಳೆಗೆ ಮಕ್ಕಳು ಗಾಂಧಿ ಜಯಂತಿಯಂದು ನಡೆಸಬೇಕೆಂದಿದ್ದ ಸತ್ಯಾಗ್ರಹವೂ ಮನೆಯ ಹಿರಿಯರ ಅಸಹಕಾರ ಹಾಗೂ ಬೆದರಿಕೆಗಳಿಂದಾಗಿ ನಡೆಯದೇ ಇರುವುದು ಎಲ್ಲ ಮಕ್ಕಳ ಮನಸ್ಸಿಗೆ ನೋವುಂಟುಮಾಡುತ್ತದೆ.

Read More...

ಮಕ್ಕಳ ಮನೋಲೋಕದ ‘ಅಮರೊ’

ಈ ಹಂಬಲಗಳೊಂದಿಗೆ ರೂಪಿಸಿದ ಮೇವುಂಡಿ ಮಲ್ಲಾರಿ ಮಕ್ಕಳ ಕಾದಂಬರಿ ಸುಗ್ಗಿಯ ಹನ್ನೊಂದನೇ ಕೃತಿಯಾಗಿ ‘ಅಮರೊ’ ಬಂದಿದೆ. ಸಂಧ್ಯಾ ಸಾಹಿತ್ಯ ವೇದಿಕೆಯ ಸಹಕಾರದಲ್ಲಿ ‘ಅಭಿನವ’ ಪ್ರಕಟಿಸಿರುವ ಈಕಾದಂಬರಿಯನ್ನು ಹಿಂದಿಯಲ್ಲಿ ಹೆಸರಾಂತ ಲೇಖಕಿ ಸುಕೀರ್ತಿ ಭಟ್ನಾಗರ ಬರೆದಿದ್ದಾರೆ. ಈಗ ಇದನ್ನು ಕನ್ನಡಕ್ಕೆ ತಂದವರು ಯುವ ಉತ್ಸಾಹಿ ಬರಹಗಾರ ಯಲ್ಲಪ್ಪ ಹಂದ್ರಾಳ. 

Read More...