Book Watchers

ಶಿವು ಕೆ. ಲಕ್ಕಣ್ಣವರ

ಶಿವು ಲಕ್ಕಣ್ಣವರ, ಶಾಲಾ ದಿನಗಳಲ್ಲೇ ಪ್ರೇಮ ಕಾವ್ಯದಿಂದ ಶುರುವಾದ ಬರವಣಿಗೆ ಮುಂದೆ ಕಾಲೇಜು ದಿನಗಳಿಂದ ಸಾಮಾಜಿಕ ಸ್ಪಂದನದ ಬರವಣಿಗೆಗೆ ಬೆಳೆಯಿತು. 'ಹೀಗೊಂದು ಮುಟ್ಟಬಾರದರ ಕತೆ' ಕವನ ಸಂಕಲನ ಮತ್ತು ಕಾಲೇಜು ದಿನಗಳಲ್ಲೇ ಬರೆದ 'ಸಾಮರಸ್ಯ ಬಿಂದು' ಇನ್ನೂ ಹಸ್ತಪ್ರತಿಯಲ್ಲೇ ಇವೆ. ಅವುಗಳನ್ನು ಈಗ ಪುಸ್ತಕ ರೂಪದಲ್ಲಿ ತರುವ ಆಸೆ ಹೊತ್ತಿದ್ದಾರೆ… ಹೀಗೆ ಹವ್ಯಾಸಿ ಬರಹಗಾರರಾಗಿದ್ದು, ಪತ್ರಕರ್ತರೂ ಹೌದು. ಅರಕೇರಿಯವರ ಆಗಿನ 'ಈ ವಾರ' ವಾರ ಪತ್ರಿಕೆಯಲ್ಲಿ ಕಾಲೇಜು ದಿನಗಳಲ್ಲೇ ಧಾರವಾಡ ಜಿಲ್ಲೆಯ ವರದಿಗಾರರಾಗಿ ಕೆಲಸ ಮಾಡಿದ್ದಾರೆ. ಶೂದ್ರ ಶ್ರೀನಿವಾಸರ ವಾರ ಪತ್ರಿಕೆಗೆ ಸಾಹಿತ್ಯಕ ಬರವಣಿಗೆ. ಆನಂತರ 'ಅಗ್ನಿ' ವಾರ ಪತ್ರಿಕೆಗೆ ವರದಿ, ಲೇಖನ ಬರೆದಿದ್ದಾರೆ.

Articles

ನೆಲಮೂಲದ ಅಧ್ಯಯನ ಮತ್ತು ಅನುಭವದ ಘಮಲೇಯಾಗಿದೆ 'ಹಾಣಾದಿ'..!

ಈ ಬಿಸಿಲಂದ್ರೆ ಅಪ್ಪ ಇದ್ದಂಗೆ, ಮುಂಜಾನೆ ಎಳೆ ಮಗುವಿನಂತೆ, ಮಧ್ಯಾನ ಉರಿ ಬಿಸಿಲಿನಂತೆ ಸಿಡುಕಿನ ಮನುಷ್ಯ, ರಾತ್ರಿ ಬಿಸಿಲು ಬಿಟ್ಟು ಹೋದ ಅವಶೇಷದಂತಿರುತ್ತಿದ್ದ. ಬಿಸಿಲಿನಷ್ಟೆ ಸದ್ದಿಲ್ಲದೆ ಕುದಿಯುತ್ತಿರುವ ಮನುಷ್ಯ” “ನೀರು ಹರಿದು ನುಣುಪಾದ ಜಾರು ಕಲ್ಲುಗಳು. ಉಸುಕು ಮಣ್ಣು ಬೆರೆತು ನೆಲದಲ್ಲಿ ನೀರು  ನಿಂತ ಅಗಲವಾದ ಜಾಗ. ಮಧ್ಯೆ ಮಧ್ಯೆ ವಿಚಿತ್ರ ಕೀಟಗಳ ಹಾರಾಟ” ಈ ಮೇಲಿನ ಸಾಲುಗಳು ನಾನು ಇತ್ತೀಚಗೆ ಓದಿರುವ ಕಪಿಲ ಪಿ. ಹುಮನಾಬಾದೆ ಎನ್ನುವ ಪ್ರೀತಿಯ ಹರೆಯದ ಹುಡುಗನ ’ಹಾಣಾದಿ’ ಕಾದಂಬರಿಯ ಸಾಲುಗಳು.

Read More...

ಲಕ್ಷ್ಮಣ ಗಾಯಕವಾಡರ 'ಉಚಲ್ಯಾ' ಎಂಬ ಹೀಗೊಂದು ಮುಟ್ಟಬಾರದವರ ಮರಾಠಿ ಕಥೆ..!

ಬುಡಕಟ್ಟು ಸಮುದಾಯವೊಂದರ ಬದುಕಿನ ನರಕ ಸದೃಶ್ಯ ಜೀವನವನ್ನು ಎಳೆಎಳೆಯಾಗಿ ಬಿಚ್ಚಿಟ್ಟ ಉಚಲ್ಯಾ ಕೃತಿ ಹಲವು ಭಾಷೆಗಳಿಗೆ ಅನುವಾದಗೊಂಡಿದೆ. ಮೂಲ ಕೃತಿಗೆ 1988ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ. ಇಂಥಹ ಮೌಲ್ಯಯುತ ಕೃತಿಯನ್ನು ಚಂದ್ರಕಾಂತ ಪೋಕಳೆಯವರು ಅಷ್ಟೇ ಸೂಕ್ಷ್ಮವಾಗಿ ಕನ್ನಡೀಕರಿಸಿದ್ದಾರೆ.

Read More...

'ಹೌದು ನಾನು ಕೌದಿ' ಎನ್ನುವ ವಿಜಯಕಾಂತ ಪಾಟೀಲರ ಪ್ರಕೃತಿ ಸಹಜ ಶೈಲಿಯ ಕವನಗಳು..!

ಉತ್ತರ ಕರ್ನಾಟಕದ ಬದುಕಿನ ಹಿನ್ನೆಲೆಯನ್ನು ಮೈಗೂಡಿಸಿಕೊಂಡಿದ್ದರೂ ಅದು ಒಟ್ಟು ಕರ್ನಾಟಕದ ನೆಲದ ಬದುಕಿನ ಸವಾಲುಗಳನ್ನು ಎದುರುಗೊಂಡಂತಿದೆ. ವಿಜಯಕಾಂತರ ಲಯ‌ವಿಧಾನ ನವೋದಯ ಕವಿಗಳು ಅದರಲ್ಲೂ ನರಸಿಂಹಸ್ವಾಮಿ, ಜಿ ಎಸ್ ಶಿವರುದ್ರಪ್ಪ, ಚೆನ್ನವೀರ ಕಣವಿ ಮುಂತಾದವರು ಬಳಸಿದ ಲಯಗಳು ನೆನಪಿಗೆ ಬರುತ್ತವೆ. ಲಯಕ್ಕೆ ತಕ್ಕ ಭಾಷೆಯನ್ನು ಹೆಣೆಯುವಾಗ ವಿಜಯಕಾಂತ ಪಾಟೀಲರು ಸರಳವಾದ ಭಾಷೆಯನ್ನು ಬಳಸುತ್ತಾರೆ... 

Read More...

ಸನಾತನವಾದಿ 'ಪಂಚಾಚಾರ್ಯರ ಪೂರ್ವಾಗ್ರಹಗಳು'..!

ವೀರಭದ್ರ ಚೆನ್ನಮಲ್ಲ ಸ್ವಾಮಿಗಳು ಬರೆದ ಈ ಹೊತ್ತಿಗೆಯಲ್ಲಿ ಮೇಲಿನ ಆಶಯದ ಹಲವಾರು ಪ್ರಶ್ನೆಗಳನ್ನು ಎತ್ತಿದ್ದಾರೆ. ಈ ಪ್ರಶ್ನೆಗಳನ್ನು 'ಜಗದ್ಗುರು'ಗಳಂತೂ ಕೇಳಿಸಿಕೊಳ್ಳಲಾರರು. ಆದರೆ ತನ್ನ ದುಃಖ, ಸಂಕಟ, ನೋವುಗಳನ್ನು ನುಂಗಿಕೊಂಡು ಇವರ ಪಲ್ಲಕ್ಕಿಗಳನ್ನು  ಹೊರುವ ಎಲ್ಲಾ ಧರ್ಮದ ಜನರು ಕೇಳಿಸಿಕೊಂಡರೆ ಈ ಬರಹ ಸಾರ್ಥಕವಾದೀತು.

Read More...

ಗ್ರಾಮೀಣ ಬದುಕಿನ ಸೊಗಡನ್ನು ತುಂಬಿಕೊಂಡಿರುವ ಕತಾಸಂಕಲನ ‘ಒಂದು ಹೆಣದ ಸುತ್ತಮುತ್ತ’

ಕನ್ನಡ ಗ್ರಾಮೀಣ ಬದುಕಿನ ವೈವಿಧ್ಯತೆ, ಏಕತೆ,‌ ಮಾನವೀಯತೆ, ನಂಬಿಕೆ ಮತ್ತು ಆಚರಣೆಗಳ ಕಥಾಸಂಕಲನವೇ ‘ಒಂದು ಹೆಣದ ಸುತ್ತಮುತ್ತ’..!

Read More...