ಪತ್ರಕರ್ತೆ, ಲೇಖಕಿ, ಸಿನಿಮಾ ವಿಮರ್ಶಕಿ ಸಂಧ್ಯಾರಾಣಿ ಅವರು ಕೋಲಾರ ಜಿಲ್ಲೆಯ ಬಂಗಾರಪೇಟೆಯವರು. ಚಿನ್ನದ ಗಣಿ ಕೆ.ಜೆ.ಎಫ್‌ನಲ್ಲಿ ಪದವಿ ಶಿಕ್ಷಣ ಪಡೆದಿರುವ ಇವರು ಪ್ರಸ್ತುತ ಹವ್ಯಾಸಿ ಪತ್ರಕರ್ತೆಯಾಗಿ ಕೆಲಸ ಮಾಡುತ್ತಿದ್ದಾರೆ.
ನೀವು ಕರುಣಾನಿಧಿ ಹೇಗೆ ದ್ರಾವಿಡ ಅಸ್ಮಿತೆಯಾಗಿದ್ದರು ಎನ್ನುವುದನ್ನು ವಿವರಿಸಿದ್ದಿರಿ, ಅದು ನನಗೆ ತುಂಬಾ ಇಷ್ಟವಾಗಿತ್ತು. ಹಾಗೆ ಇಷ್ಟವಾಗುವ, ಯೋಚನೆಗೆ ಹಚ್ಚುವ, ನೆನಪಿನಲ್ಲಿ ಉಳಿಯುವ ಅನೇಕ ಬರಹಗಳು ಈ ಪುಸ್ತಕದಲ್ಲಿವೆ. ಪುಸ್ತಕಕ್ಕೆ ಎಚ್ ಎಸ್ ಆರ್ ಅವರು ಬರೆದ ಮುನ್ನುಡಿ ಅದಕ್ಕೊಂದು ಮೌಲಿಕವಾದ ಸೇರ್ಪಡೆ.
ಇಲ್ಲಿ ನಾನು ಬೇಕೆಂದೇ ’ಹುಚ್ಚು’ ಎನ್ನುವ ಪದವನ್ನು ಬಳಸುತ್ತಿದ್ದೇನೆ. ಪ್ರತಿ ಭಾನುವಾರ ರೈಲಿನಲ್ಲಿ ಹೋಗುತ್ತಾ ಒಂದೂವರೆ ಗಂಟೆ, ಬರುತ್ತಾ ಒಂದೂವರೆ ಗಂಟೆ ವ್ಯಯಿಸಿ ಎರಡು, ಎರಡೂವರೆ ಗಂಟೆಗಳ ನಾಟಕ ನೋಡುವುದೆಂದರೆ ಅದು ಪ್ರೀತಿಯ ಮುಂದಿನ ಹಂತ, ಹುಚ್ಚು ಎಂದೇ ಹೇಳಬೇಕು! ಕಿರಣ್ ಭಟ್ ಹೊನ್ನಾವರ ಅವರು ಕೇರಳದಲ್ಲಿ ನೋಡಿದ ನಾಟಕಗಳ ಬಗ್ಗೆ ಇಲ್ಲಿ ಬರೆದಿದ್ದಾರೆ.