ರವಿರಾಜ್ ಸಾಗರ್
ಶಿಕ್ಷಕ, ಹವ್ಯಾಸಿ ಬರಹಗಾರ ರವಿರಾಜ್ ಸಾಗರ್ ಎಂತಲೇ ಪರಿಚಿತರಾಗಿರುವ ರವಿಚಂದ್ರ ಡಿ. ಅವರು 1986 ಜುಲೈ 19 ರಂದು ಜನಿಸಿದರು. ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಮಂಡಗಳಲೆ ಗ್ರಾಮದವರಾದ ಇವರು ಪ್ರಸ್ತುತ ರಾಯಚೂರಿನ ಮಾನ್ವಿ ತಾಲ್ಲೂಕಿನ ಮಲ್ಕಾಪುರ ಸರ್ಕಾರಿ ಶಾಲೆ ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಕಾಲೇಜು ದಿನಗಳಿಂದಲೇ ಬರೆಯುವ ಹವ್ಯಾಸ ಬೆಳೆಸಿಕೊಂಡ ರವಿಚಂದ್ರ ಇವರು ಪತ್ರಿಕೋದ್ಯಮ ಇತಿಹಾಸ ಮತ್ತು ಪ್ರಾಕ್ತನಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ವೃತ್ತಿಯ ಜೊತೆಗೆ ಜಾನಪದ ಸಂಪಾದನೆ, ಫೋಟೋಗ್ರಫಿಯಲ್ಲಿಯೂ ತೊಡಗಿಕೊಂಡಿದ್ದಾರೆ.