Book Watchers

ಚಾಂದ್ ಪಾಷಾ (ಕವಿಚಂದ್ರ)

ಚಾಂದ್ ಪಾಷ ( ಕವಿಚಂದ್ರ ) ಬೆಂಗಳೂರು ವಿ ವಿ ಯ ಕನ್ನಡ ಅಧ್ಯಯನ ಕೇಂದ್ರದಲ್ಲಿ ಕನ್ನಡ ಎಂ. ಎ ಪಡೆದಿದ್ದು, ಕತೆ , ಕವಿತೆ, ಲೇಖನ ಬರೆಯುವ ಹವ್ಯಾಸವುಳ್ಳವರು.. ಇವರ ಕವಿತೆಗಳು, ಮಯೂರ, ತುಷಾರ, ಸಂವಾದ, ಹೊಸತು, ಸಂಗಾತ ಸಂಕ್ರಮಣ.. ಇತ್ಯಾದಿ ಕನ್ನಡದ ಪ್ರಮುಖ ಕನ್ನಡ ಪತ್ರಿಕೆ ಯಲ್ಲಿ ಪ್ರಕಟವಾಗಿವೆ. ಅನೇಕ poetry formation ನಲ್ಲಿ ಭಾಗವಹಿಸಿದ್ದಾರೆ. ದೀವಟಿಗೆ ಎಂಬ ಕೈ ಬರಹ ಪತ್ರಿಕೆ ಯ ಸಂಪಾದಕರು. ’ಮೌನದ ಮಳೆ’ ಕವನ ಸಂಕಲನ ಬಿಡುಗಡೆಯಾಗಿದೆ. ದಿ ಆಕ್ಸ್ಫರ್ಡ್ ಕಾಲೇಜಿನಲ್ಲಿ ಕನ್ನಡ ಸಹಾಯಕ ಪ್ರಾಧ್ಯಾಪಕರಾಗಿ ತಮ್ಮ ವೃತ್ತಿ ಜೀವನವನ್ನು ಪ್ರಾರಂಭಿಸಿದ್ಧಾರೆ.

Articles

ಕಲ್ಯಾಣತ್ವದ ’ಬಸವ ಕಾಲಿನ ಜೋಡಿ ಮೆಟ್ಟು’

’ಕಲ್ಯಾಣತ್ವದ ಪರಿಕಲ್ಪನೆ’ ಕಾವ್ಯವಾಗಿಸುವಲ್ಲಿ ರವಿ ಯಶಸ್ಸಿಯಾಗಿದ್ದಂತು ಸುಳ್ಳಲ್ಲ. ಎಂದೋ ಹೊತ್ತಿಕೊಂಡ ಕಲ್ಯಾಣದ ಕಿಡಿ, ಈಗಲೂ ಕವಿ ಹೃದಯವನ್ನು ಬೇಯುವಂತೆ ಮಾಡಿದೆ ಎಂದರೆ, ಶರಣ ಸಂಸ್ಕೃತಿ ನೆಲ ಮೂಲದ ಸಂಸ್ಕೃತಿ ಎನ್ನುವುದರಲ್ಲಿ ಎರಡು ಮಾತಿಲ್ಲ!

Read More...

ಹಲವು ಬಣ್ಣದ 'ಗ್ರಾಫಿಟಿಯ ಹೂವು'

’ಗ್ರಾಫಿಟಿಯ ಹೂವು’ ಕಾವ್ಯದ ತುಮುಲ, ತುರಿಕೆಗಳು ಪ್ರತಿಯೊಬ್ಬರಿಗೂ ಅನುಭವಕ್ಕೆ ಬಂದಿರುವವೆ; ಆದರೆ, ಅವುಗಳನ್ನು ಅಭಿವ್ಯಕ್ತಿಸಿದ ರೀತಿ ಮಾತ್ರ ಫ್ರೆಶ್ ಅನ್ನಿಸುದಲ್ಲೆ ಸಂಕಲನದ ಸುಮ ಘಮ್ಮೆನ್ನುವುದು. ಬದುಕಿನ ಬಂಡಾಯತನದೊಂದಿಗೆ ಅಸಹಾಯಕ ರಾಜಿತನಗಳು ಮನುಷ್ಯ ಮನಸ್ಸಿನ ಮಿಡಿತದಷ್ಟೇ ಸತ್ಯ !

Read More...

ಏಪ್ರಿಲ್ ಫೂಲ್ : ಮೂರ್ಖತ್ವ ಸಮಾಜದೊಂದಿಗಿನ ಮನುಷ್ಯತ್ವದ ಮುಖಾಮುಖಿ

ಇಲ್ಲಿನ ಬಹುತೇಕ ಕತೆಗಳಿಗೆ ಬಹು ಆಯಾಮದ ನೆರಳುಗಳಿವೆ. ತೀಷ್ಣ ವಿಮರ್ಶೆ ಅದರ ಬೇರಾಗಿದ್ದರೆ, ಹೊಸ ಮನ್ವಂತರ ಕತೆಯ ಆಶಯದ ರೂಪದಲ್ಲಿ ಚಿಗುರಾಗೆ ಇರುತ್ತದೆ.  ಸಮ ಸಮಾಜದಲ್ಲಿ ಯಾವುದೂ ಸಮವಾಗಿ ಹಂಚಿಕೆ ಆಗಿಲ್ಲ ಎಂಬ ಅರಿವಿರುವ ಕತೆಗಾರ, ಖಾಲಿ ಬೊಗಸೆ ತುಂಬುವ ಕೆಲಸ ಮಾಡಿದ್ದಾನೆ.

Read More...