Book Watchers

ಆನಂದ್ ಋಗ್ವೇದಿ

ಕವಿ, ಕತೆಗಾರ ಆನಂದ ಋಗ್ವೇದಿ ಅವರು ಪ್ರಸ್ತುತ ದಾವಣಗೆರೆಯ ಸರ್ಕಾರಿ ಜಿಲ್ಲಾ ಆಸ್ಪತ್ರೆಯಲ್ಲಿ ವ್ಯವಸ್ಥಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕನ್ನಡ ಸಾಹಿತ್ಯ ಕೃಷಿಯಲ್ಲಿಯೂ ತೊಡಗಿಕೊಂಡಿರುವ ಆನಂದ್ ಅವರು ಜನ್ನ ಮತ್ತು ಅನೂಹ್ಯ ಸಾಧ್ಯತೆ, ಮಗದೊಮ್ಮೆ ನಕ್ಕ ಬುದ್ಧ, ನಿನ್ನ ನೆನಪಿಗೊಂದು ನವಿಲುಗರಿ ಇವರ ಪ್ರಮುಖ ಕೃತಿಗಳು. ಕನ್ನಡ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಮುಂತಾದ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.

Articles

ಬೇರೆ ಬೇರೆ ಹೂಗಳಿಂದ ಕಟ್ಟಿದ ಹಾರದ ವಿಶಿಷ್ಟ ಘಮ ‘ಕನಸುಗಳು ಖಾಸಗಿ’

ಅವರ ಕಥಾ ಸಂಕಲನ "ಕನಸುಗಳು ಖಾಸಗಿ" ನನ್ನ ಕೈಗೆ ಸಿಕ್ಕ ಕೂಡಲೇ ನನ್ನನ್ನು ಸೆಳೆದದ್ದು ಅವರ ಪ್ರಾಸ್ತಾವಿಕ ಮಾತುಗಳು. 'ಕತೆ ಹುಟ್ಟುವ ಪರಿ'ಯನ್ನು ಅವರ ಮಾತುಗಳಲ್ಲೇ ಕಟ್ಟಿಕೊಟ್ಟಿರುವ ಕತೆಗಾರ ಅವರ ಕತೆಗಳನ್ನು ಹೊಗಬಹುದಾದ ಮಾರ್ಗ ಮತ್ತು ಬಾಗಿಲುಗಳನ್ನು ಪರಿಚಯಿಸಿದ್ದಾರೆ.

Read More...

ಮಾನವೀಯ ಪ್ರೀತಿಯ ಅನುಸರಣ `ಜೊಲಾಂಟಾ’

ಒಂದು ಭೂ ಪ್ರದೇಶದ ಗಡಿಯ ಈಚಿನವರಿಗೆ ಆಚೆಯ ಕಡೆಯವರು ಶತೃಗಳು! ಒಂದು ಸಮುದಾಯದವರಿಗೆ ಮತ್ತೊಂದು ಸಮುದಾಯದವರು ಪರಕೀಯರು! ಒಂದು ಧರ್ಮದವರಿಗೆ ಮತ್ತೊಂದು ಧರ್ಮದವರು ಅಧರ್ಮೀಯರು!! ಇದು ಚಿದಂಬರ ರಹಸ್ಯವೇನೂ ಅಲ್ಲ, ಆದರೆ ಯಾರಿಂದಲೂ ಬಿಡಿಸಲಾಗದ ಗೋಜಲು, ಕಗ್ಗಂಟು. ಈ ಸಾರ್ವಕಾಲಿಕ ಬಿಕ್ಕಟ್ಟನ್ನು ಎಡದಿಂದ ನೋಡಿದರೂ, ಬಲದಿಂದ ನೋಡಿದರೂ ಗಂಟು ಬಿಚ್ಚಲಾಗುವುದೇ ಇಲ್ಲ! ಅಥವಾ ಅದು ಬಿಚ್ಚಬಹುದಾದ ಗಂಟು ಅಲ್ಲ - ಕಗ್ಗಂಟು!

Read More...

ಬದುಕನ್ನು ಗ್ರಹಿಸಿದ ಹಾಗೂ ವಾಸ್ತವದ ಅರಿವಿರುವ ಕವಿತೆಗಳ ಸಂಕಲನ ‘ಕಾಡ ಕತ್ತಲೆಯ ಮೌನ ಮಾತುಗಳು’

ಯಾವ ಕವಿಯೂ ಉತ್ತರಿಸಲಾಗದ ಪ್ರಶ್ನೆ ಇದು. ನಿಯತಿಯ ನಿಯಮದಂತೆ ಜಗವೆಲ್ಲ ನಡೆದಿರುವಾಗ ಆ ನಿಯಮವನ್ನೇ ಪರಿಕಿಸುವ, ಪ್ರಶ್ನಿಸುವ, ನಿಯತಿಯನ್ನೇ ತನ್ನಲ್ಲಿ ಪುನರ್ ಸೃಷ್ಟಿಸಿಕೊಳ್ಳುವಾಗ ಒಂದು ಶಬ್ದ ಹೊಮ್ಮುತ್ತದೆ. ಓಂಕಾರಕ್ಕಿಂತ ಕಿಂಚಿದೂನ ಆ ಶಬ್ದ ಯಾರಿಗೆ ಕೇಳುತ್ತದೋ ಅವ ಶಬ್ದದ ಬೆನ್ನು ಹತ್ತುತ್ತಾನೆ. ಅಕ್ಷರಗಳ ಏಣಿ ಹಿಡಿದು ಸರ್ರನೆ ಮೇಲೇರುವ ಈ ಹಾವು ಏಣಿ ಆಟದಲ್ಲಿ ಧುತ್ತನೇ ಎದುರಾಗುವುದು ಬದುಕು ಎಂಬ ಪೂರ್ವನಿರ್ಧಾರಿತ ನಿಯಮಗಳ ಹಾವು. ಸರ್ರನೇ ಏರಿದವರನ್ನೂ ಜರ್ರನೇ ಕೆಳಗಿಳಿಸುವ, ಬದುಕ ನೆಲೆ ನೆಲ ಪರಿಚಯಿಸುವ ಈ ಆಟದಲ್ಲಿ ಆ ಶಬ್ದವ ಮರೆಯದಂತೆ ಮತ್ತೆ ಮತ್ತೆ ಅಕ್ಷರದ ಏಣಿ ಹತ್ತುವಂತೆ ಮಾಡುವ ಹುಕಿ ಇದೆಯಲ್ಲಾ - ಅದು ಎಲ್ಲಾ ಬರಹಗಳ ಮೂಲ ಕಾರಣ. ಅಂತಹ ಹುಕಿ ಹುಟ್ಟುವ ಸಮಯವೇ ಕವಿತೆ ಎಂಬ ಗೀಜಗ ಬರೆವವನ ಎದೆಯಲ್ಲಿ ಅಕ್ಷರದ ಗೂಡು ಕಟ್ಟುತ್ತದೆ!

Read More...

ಮನದೊಳಗಣ ಹೊರಗಣ ಬೆಳಕು ‘ಒಂದು ಬಾಗಿಲು ಮತ್ತು ಮೂರು ಚಿಲ್ಲರೆ ವರ್ಷಗಳು’

ಶಾಂತಿಯವರದು ಸ್ತ್ರೀ ಬರಹಗಾರ್ತಿಯರಲ್ಲೇ ಭಿನ್ನ ದನಿ. ಅವರ ಕತೆಗಳಲ್ಲಿ ಕಾಣಸಿಗುವುದು ಸ್ತ್ರೀ ಪಾತ್ರಗಳು ಮಾತ್ರವಲ್ಲ, ಪುರುಷ, ಗ್ರಾಮ, ನಗರ, ವ್ಯವಹಾರಿಕ. . . ಹೀಗೇ ಲೋಕಾಂತದ ಸಕಲೆಂಟು ಆಯಾಮಗಳೂ. ಅವರ ಆ ಆರಂಭಿಕ ಕತೆಗಳಲ್ಲಿ ಮುಗ್ಧೆ, ಸಾಂಸಾರಿಕ ಮಿತಿಯಲ್ಲೂ ಅತೀತತೆಯ ಸ್ತ್ರೀ, ತನ್ನ ದೈಹಿಕ ತುರ್ತು ನೀಗಿಸಿಕೊಳ್ಳಲು ವೇಶ್ಯಾ ಗೃಹಕ್ಕೆ ಹೋಗುವ ಅಂತಃಕರಣದ ಪುರುಷ,

Read More...

ವಿಸಂಗತಿಗಳನ್ನು ವಿಡಂಬಿಸುವ 'ಮೂರನೇ ಕಣ್ಣು’

ಪ್ರಬಂಧಗಳ ಈ ಎಲ್ಲಾ ವಿಶೇಷತೆಗಳು ಒಬ್ಬರೇ ಲೇಖಕರ ಒಂದು ಸಂಕಲನದಲ್ಲಿ ಸಿಗುವುದು ಅತ್ಯಪರೂಪದ ಸಾಧ್ಯತೆ. ಅದು ಸಾಧ್ಯವಾಗಿರುವುದು ಚಿದಾನಂದ ಸಾಲಿಯ 'ಮೂರನೆಯ ಕಣ್ಣು' ಸಂಕಲನದಲ್ಲಿ.

Read More...