Story/Poem

ಸೌಜನ್ಯ ದತ್ತರಾಜ

ಲೇಖಕಿ ಸೌಜನ್ಯ ದತ್ತರಾಜ ಅವರು ಹದಿನೇಳು ವರ್ಷಗಳ ಕಾಲ ವೃತ್ತಿಯಲ್ಲಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಆಪ್ತ ಸಮಾಲೋಚನಾ ತರಬೇತಿಯನ್ನೂ ಪಡೆದಿರುತ್ತಾರೆ. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಫ್ರಿಲಾನ್ಸರ್ ಬರಹಗಾರರೂ ಆಗಿದ್ದಾರೆ. ಸಿನಿಮಾ, ನಾಟಕ ಮತ್ತು ಪುಸ್ತಕಗಳ ಕುರಿತು ಪರಿಚಯಾತ್ಮಕ ಲೇಖನಗಳನ್ನು ಬರೆಯುತ್ತಿರುತ್ತಾರೆ. ಇವರು ಬರೆದ ಕಥೆಗಳು 'ತರಂಗ', 'ಮಂಗಳ', 'ವಿಶ್ವವಾಣಿ' ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. 2014ರ 'ಕನ್ನಡಪ್ರಭ' ದೀಪಾವಳಿ ವಿಶೇಷಾಂಕದ ಸಣ್ಣ ಕಥಾ ಸ್ಪರ್ಧೆಯಲ್ಲಿ ಬಹುಮಾನವನ್ನೂ ಗಳಿಸಿದ್ದಾರೆ. ಕಥೆ, ಕವಿತೆ, ಮಕ್ಕಳಿಗಾಗಿ ನಾಟಕಗಳನ್ನೂ ಬರೆದಿರುವ ಇವರು, ಇತ್ತೀಚಿನ ದಿನಗಳಲ್ಲಿ ವಿಷುವಲ್ ಮೀಡಿಯಾದಲ್ಲಿ ಚಿತ್ರಕಥೆ, ಸಂಭಾಷಣೆಗಳನ್ನು ಬರೆಯುವುದರಲ್ಲೂ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.

More About Author

Story/Poem

ಆಪಾದನೆ

ನನ್ನ ರೆಪ್ಪೆಯಲುಗುವ ಮುನ್ನ ನೀ ಹೋಗಿ ಬಿಡು ಬೇಗ ಮತ್ತೆಂದೂ ತಿರುಗಿ ನೋಡದೆ ತುಂಬಿದ ಕಣ್ ಕೊಳವನ್ನು ಹಿಂಗಿಸಿ ಬಿಡುವೆನು ತಿರುಗಿಯೂ ನೋಡದೆ ಹೋಗುತಿರುವ ನಿನ್ನ ನೆನೆನೆನೆದು ನೀ ತಿರುಗಿ ನೋಡಿದೆಯಾದರೇ ಕೊಚ್ಚಿಹೋಗಿ ಬಿಡಬಹುದು ಗುರಿಯೆಡೆಗಿನ ಕನಸುಗಳು ಕಣ್ಣ ಜಲಪಾತದಲಿ ಬೇಡ ...

Read More...