Story/Poem

ಶಿಲ್ಪ ಬೆಣ್ಣೆಗೆರೆ (ಶಿಲ್ಪ ಬಿ.ಎಂ)

ಕವಿ ಶಿಲ್ಪ ಬೆಣ್ಣೆಗೆರೆ ಮೂಲತಃ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲ್ಲೂಕಿನ ಬೆಣ್ಣಿಗೆರೆಯವರು. ಸುಮಾರು ಹತ್ತು ವರ್ಷಗಳ ಕಾಲ ಪ್ರಾಥಮಿಕ ಶಾಲಾ ಶಿಕ್ಷಕಿಯಾಗಿ ಸೇವೆ ಸಲ್ಲಿಸಿ ಕಳೆದ ಮೂರು ವರ್ಷಗಳಿಂದ ಕನ್ನಡ ಸಹಾಯಕ ಪ್ರಾಧ್ಯಾಪಕರಾಗಿದ್ದಾರೆ. ಕರ್ನಾಟಕ ಮುಕ್ತವಿಶ್ವವಿದ್ಯಾನಿಲಯದಿಂದ ಸ್ನಾತಕ ಹಾಗೂ ಸ್ನಾತಕೋತ್ತರ ಪದವೀಧರರು. ಪ್ರಸ್ತುತ ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ ಸಂಶೋಧನಾ ವಿದ್ಯಾರ್ಥಿನಿ.  ‘ಕೊಲ್ಲುವವನೇ ದೇವರಾದನಲ್ಲ’ ಕವನ ಸಂಕಲನ ಪ್ರಕಟವಾಗಿದೆ. 

More About Author

Story/Poem

ರಿಪೇರಿ 

  ದ್ವಿಚರಿಯಾಗಿ ಸಾಗುತ್ತಿದೆ ಗುರಿಯೇ ಇಲ್ಲದೆ ದಾರಿಗುಂಟ ಬಹಳ ದೂರವೇನೂ ಬಂದಿರಲಿಲ್ಲ ಅಷ್ಟರಲ್ಲಿಯೇ ಬಂಡಿ ಉಬ್ಬಸಬಡುತ್ತಾ ನಿಂತುಬಿಟ್ಟಿತು ಏಕಾಏಕಿ ಈಗ ಬಂಡಿಗೆ ಒಲವನೊದಗಿಸುತಾ ತಳ್ಳುವ ಕಾಯಕ ತೋಳಗಳದು ನೂಕಲಾರದೆ ನೂಕಿ ಮುಂದೆಮುಂದಕೆ ಸುಸ್ತು ಹೊಡೆಯುವಷ್ಟರಲ್ಲಿ ...

Read More...