ಸಂಧ್ಯಾ ಹೊನಗುಂಟಿಕರ್
ಸಂಧ್ಯಾ ಹೊನಗುಂಟಿಕರ್ ಅವರು ಜನಿಸಿದ್ದು 1964 ಅಕ್ಟೋಬರ್ 23, ಗುಲಬರ್ಗಾದಲ್ಲಿ. ತಂದೆ - ವಾಸುದೇವರಾವ್ ಕುಲಕರ್ಣಿ, ತಾಯಿ- ಸರೋಜಾಬಾಯಿ ಕುಲಕರ್ಣಿ. ಬಾಲ್ಯ ಕಳೆದಿದ್ದು ಮತ್ತು ವಿದ್ಯಾಭ್ಯಾಸ ಮಾಡಿದ್ದು ಯಾದಗಿರಿಯಲ್ಲಿ. ಎಂ.ಎ. (ಕನ್ನಡ) ಪದವೀಧರೆ ಆಗಿರುವ ಅವರಿಗೆ ಸಮಾಜ ಸೇವೆ, ಅಭಿನಯ ಆಸಕ್ತಿಯ ಕ್ಷೇತ್ರಗಳು. ಕಡಲ ಒಡಲು ಬಗೆದಷ್ಟು (2002), ಹರಿದ ಹಾಸಿಗೆ ಹಂಬಲ (2008), ಹಾರಲಾಗದ ನೊಣ, (ಕತೆಯ ಸಂಕಲನಗಳು) ಯಶಸ್ವಿ ಬದುಕಿಗೆ ಮೆಟ್ಟಿಲು (ಶರಣರ ಹದಿನೈದು ಕತೆಗಳು) (ಮಕ್ಕಳ ಕಥಾ ಸಂಕಲನ) (2009), ಸೂರ್ಯ ಮುಖಿ (ಪ್ರಬಂಧಗಳು) ಸಖಿ ಶಕ್ತಿ (40 ವರುಷ ಸಮಾಜಮುಖಿ ಕೆಲಸದಲ್ಲಿರುವ ಸಂ. ಮ. ಮಂ.ದ ಪರಿಚಯಾತ್ಮಕ ಕೃತಿ) ಒಂದೇ ಕ್ಯಾನ್ವಾಸಿನಲ್ಲಿ (ಕಥಾಸಂಕಲನ) ಮತ್ತು ದಾಸ ದರ್ಪಣ (ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಕಲಬುರ್ಗಿ ವತಿಯಿಂದ) ಪುಸ್ತಕಗಳನ್ನು ಪ್ರಕಟಿಸಿದ್ದಾರೆ.
More About Author