Story/Poem

ಪಂಜೆ ಮಂಗೇಶರಾಯ

ಪಂಜೆ ಮಂಗೇಶರಾಯರು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದಲ್ಲಿ 1874 ಫೆಬ್ರುವರಿ 22 ರಂದು ಜನಿಸಿದರು. ತಾಯಿ ಸೀತಮ್ಮ. ತಂದೆ ರಾಮಪಯ್ಯ.  ಬಂಟ್ವಾಳದಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಇವರು ಮಂಗಳೂರಿನಲ್ಲಿ ಇಂಟರ್‌ ಮೀಡಿಯೇಟ್‌ ಶಿಕ್ಷಣ ಪಡೆದರು. ಮಂಗಳೂರಿನ ಸರ್ಕಾರಿ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿ ವೃತ್ತಿ ಆರಂಭಿಸಿದರು. ಹರಟೇಮಲ್ಲ, ರಾಮಪಂ, ಕವಿಶಿಷ್ಯ ಮುಂತಾದ ಹೆಸರುಗಳಲ್ಲಿ ಬರಹಗಳನ್ನು ರಚಿಸಿದ್ದರು. ಇವರು ಬರೆದ ಹುತ್ತರಿ ಹಾಡು ಕೊಡಗಿನ ನಾಡಗೀತೆಯಾಯಿತು. 

More About Author

Story/Poem

ನಾಗರಹಾವೇ ಹಾವೊಳು ಹೂವೇ

ನಾಗರಹಾವೇ ಹಾವೊಳು ಹೂವೇ ಬಾಗಿಲ ಬಿಲದಲಿ ನಿನ್ನಯ ಠಾವೆ ಕೈಯನು ಮುಗಿವೆ ಹಾಲನೀವೆ ಬಾ ಬಾ ಬಾ ಹಳದಿಯ ಹೆಡೆಯನು ಬಿಚ್ಚೋ ಬೇಗ ಒಳಗಿನಿಂದಲೆ ಕೂಗೋ ರಾಗ ಕೊಳಲನೂದುವೆ ಆಲಿಸು ರಾಗ ನೀ ನೀ ನೀ ನೀ ಎಲೆ ನಾಗಣ್ಣ ಹೇಳೆಲೋ ನಿನ್ನ ತಲೆಯಲ್ಲಿರುವ ನಿಜವನ್ನ ಬಡುಬಗ್ಗರಿಗೆ ಕೊಪ...

Read More...