Story/Poem

ಮೂಡ್ನಾಕೂಡು ಚಿನ್ನಸ್ವಾಮಿ

ದಲಿತ-ಬಂಡಾಯ ಸಾಹಿತ್ಯ ಚಳವಳಿಯ ಸತ್ವಪೂರ್ಣ ದನಿಯಾಗಿರುವ ಕವಿ ಡಾ. ಮೂಡ್ನಾಕೂಡು ಚಿನ್ನಸ್ವಾಮಿ ಮೂಲತಃ ಗಡಿನಾಡಾದ ಚಾಮರಾಜನಗರದವರು. ಎಂ.ಕಾಂ. ಎಂ.ಎ(ಕನ್ನಡ), ಡಿ.ಲಿಟ್. ಪದವೀಧರರಾದ ಅವರು ರಾಜ್ಯ ರಸ್ತೆ ಸಾರಿಗೆ ನಿಗಮಗಳಲ್ಲಿ ಹಿರಿಯ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದಾರಲ್ಲದೆ, ನಿರ್ದೇಶಕರು(ಹಣಕಾಸು) ಹಾಗೂ ಆರ್ಥಿಕ ಸಲಹೆಗಾರರಾಗಿ ಕಾರ್ಯನಿರ್ವಹಿಸಿ ಮಾರ್ಚ್ 2012ರಲ್ಲಿ ನಿವೃತ್ತಿ ಹೊಂದಿದ್ದಾರೆ. ಜೊತೆಗೆ ಏಪ್ರಿಲ್ 2015 ರಿಂದ ಮಾರ್ಚ್ 2017 ರವರೆಗೆ ಸಮಾಜ ಕಲ್ಯಾಣ ಇಲಾಖೆಯ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದಲ್ಲಿ ಆರ್ಥಿಕ ಸಲಹೆಗಾರರಾಗಿ ಸೇವೆ ಸಲ್ಲಿಸಿದ್ದಾರೆ. 2016-17 ರ ಸಾಲಿಗೆ ಮೈಸೂರು ವಿಶ್ವವಿದ್ಯಾಲಯದ ಡಾ. ಬಿ.ಆರ್. ಅಂಬೇಡ್ಕರ್ ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರದ ಅಂಬೇಡ್ಕರ್ ಪೀಠದಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿಯೂ ಕಾರ್ಯನಿರ್ವಹಿಸಿದ್ದಾರೆ.

More About Author

Story/Poem

ನಾನೊಂದು ಮರವಾಗಿದ್ದರೆ 

ನಾನೊಂದು ಮರವಾಗಿದ್ದರೆ ಹಕ್ಕಿ ಗೂಡು ಕಟ್ಟುವ ಮುನ್ನ ಕೇಳುತ್ತಿರಲಿಲ್ಲ ನೀನು ಯಾವ ಕುಲ; ಬಿಸಿಲು ನನ್ನ ಅಪ್ಪಿಕೊಂಡಾಗ ನೆರಳಿಗಾಗುತ್ತಿರಲಿಲ್ಲ ಮೈಲಿಗೆ; ತಂಬೆಲರ ಕೂಡ ಎಲೆಗಳ ಸ್ನೇಹ ಮಧುರವಾಗಿರುತ್ತಿತ್ತು. ಮಳೆ ಹನಿಗಳು ನಾನು ಶ್ವಪಚನೆಂದು ಹಿಂದೆ ಸರಿಯುತ್ತಿರಲಿಲ್ಲ ನಾನು ಬೇರ...

Read More...

ದೆಹಲಿ ಹೊತ್ತಿ ಉರಿಯಿತು 

ಓ ದ್ವೇಷವೇ ನಿನಗದೆಷ್ಟು ಮುಖಗಳು  ಅಜ್ಞಾನಿಗಳ ಮಿದುಳ ಹೊಕ್ಕು  ಅಮಾಯಕರನ್ನು, ಅಜ್ಞಾತ   ನಿರುಪದ್ರವಿಗಳನ್ನು ಸದೆಬಡಿವ ಅಟ್ಟಹಾಸವೇಕೆ?     ಅಮ್ಮನ ಸೆರಗಿನೊಳತೂರಿ   ಮುದುಡಿದ ಭಯಬೀತ ಎಳೆ ಕಂದಮ್ಮಗಳ   ಪಿಳಿಪ...

Read More...