ಮಾರುತಿ ದಾಸಣ್ಣವರ
ಕವಿ, ಕತೆಗಾರ ಮಾರುತಿ ದಾಸಣ್ಣವರ ಬೆಳಗಾವಿ ಜಿಲ್ಲೆಯ ಗೋಕಾವಿ ತಾಲೂಕಿನ ಹೊಸಹಟ್ಟಿ ಗ್ರಾಮದವರು. ವೃತ್ತಿಯಿಂದ ಕನ್ನಡ ಅಧ್ಯಾಪಕರು. ಸಾಹಿತ್ಯ ಓದು, ಬರವಣಿಗೆಯಲ್ಲಿ ಅಪಾರ ಆಸಕ್ತಿ. ಉತ್ತಮ ವಾಗ್ಮಿಯೂ ಆದ ಅವರ ಶೈಕ್ಷಣಿಕ, ಸಾಹಿತ್ಯಕ ಕಾರ್ಯಕ್ರಮಗಳು, ಚಿಂತನೆಗಳೂ ಸೇರಿದಂತೆ 23ರೇಡಿಯೊ ಕಾರ್ಯಕ್ರಮಗಳು ಮಡಿಕೇರಿ ಆಕಾಶವಾಣಿಯಲ್ಲಿ ಪ್ರಕಟಗೊಂಡು ಜನಮನ್ನಣೆ ಗಳಿಸಿವೆ. ಇತ್ತಿಚಿನ ದಿನಗಳಲ್ಲಿ ವಿಮರ್ಶೆಗೂ ಹೆಜ್ಜೆ ಇಟ್ಟಿದ್ದಾರೆ. ಅವರ ‘ಮಬ್ಬುಗತ್ತಲೆಯ ಮಣ್ಣ ಹಣತೆ’ ಕತಾ ಸಂಕಲನ, ನಾನೂರುವ ಹೆಜ್ಜೆಗಳು, ನಡೆದೂ ಮುಗಿಯದ ಹಾದಿ( ಕವನ ಸಂಕಲನ) ಅವರ ಪ್ರಕಟಿತ ಕೃತಿಗಳು. ಅವರಿಗೆ ಕನ್ನಡ ಸಾಹಿತ್ಯ ಪರಿಷತ್ತು ದತ್ತಿನಿಧಿ ಬಹುಮಾನ, ದಲಿತ ಸಾಹಿತ್ಯ ಪರಿಷತ್ತು ಪುಸ್ತಕ ಬಹುಮಾನ, ಎಚ್ಚೆಸ್ಕೆ ಸಾಹಿತ್ಯ ಪುರಸ್ಕಾರ, ಕೆ. ಎಸ್. ನ. ಕಾವ್ಯ ಪುರಸ್ಕಾರಗಳು ಲಭಿಸಿವೆ.
More About Author