ನಿನ್ನದೆ ನೆನಪೊಂದು ಕಾಡುತಿದೆ ನೋಡು
ಹೃದಯ ಕಾಯುತ ಕಂಪಿಸಿದೆ ಬಂದು ಬಿಡು
ಒಳಗಿನ ನೋವು ಜೀವ ತಿನ್ನುತಿದೆ ಸಾಕು ಮಾಡು
ಒಲವಿನಲಿ ಹಾಡಿ ಚಿಂತೆಗಳ ದೂರ ಸರಿಸಿಬಿಡು
ಮತ್ತೆ ಮತ್ತೆ ಒತ್ತರಿಸಿ ಬರುವ ಕಣ್ಣಿರ ಒರೆಸಿಬಿಡು
ಲೋಕ ನಿಂದೆಯ ಕೇಳದೆ ಮುಂದಡಿ ಇಡು
ಹೊಸಹಾಡಿಗೆ ಹೊಸ ಪಲ್ಲವಿಯ...
ನಿನ್ನ ನೆನಪುಗಳು ದಿನವೂ ಕಾಡುತ್ತಿವೆ ಗೆಳತಿ
ಒಳಗಿನ ಬಯಕೆ ನಿತ್ಯವೂ ಅರಳುತ್ತಿವೆ ಗೆಳತಿ
ಕಾವಲಿಗಿದ್ದ ಕಣ್ಣುಗಳು ನೋಡುತ್ತಿವೆ
ಬಿಟ್ಟು ಬಿಡದೆ
ಹೃದಯ ಭಾರವಾಗಿ ಭಾವನೆಗಳು ಕಮರುತ್ತಿವೆ ಗೆಳತಿ
ಜೀವ ಜಲ್ಲೆಂದು ಹಠ ಮಾಡುತ್ತ ಕುಳಿತಿವೆ
ಹೇಳದೆ ದೂರ ಹೋದವಳ ದಾರಿ ಕಾಯುತ್ತಿವೆ ಗೆಳತ...
ಉಸಿರು ನಿಲ್ಲುವ ತನಕ ಕಾಯಕವ ಬಿಡದಾತ ನನ್ನಪ್ಪ
ಹಕ್ಕಿಯ ಹಾಗೆ ಹೆಕ್ಕಿ ತಂದು ಉಣಿಸಿದಾತ ನನ್ನಪ್ಪ
ಜೀತ ಮುಕ್ತಿ ಕೇಳಲಿಲ್ಲ ನೆಲದ ಧ್ಯಾನವ ಬಿಡಲಿಲ್ಲ
ಹಬ್ಬ ಹರಿದಿನ ಕಣ್ಮುಂದೆ ಸುಳಿದರೂ ತಿರುಗಿ ನೋಡದಾತ ನನ್ನಪ್ಪ
ತುತೂ ಬಿದ್ದ ಆಕಾಶ ನೋಡುವ ಮೈ ಅಂಗಿ ತೊಟ್ಟವ
ಹಸಿವನ್ನು ಹಾಸಿ ಹೊದ್ದ...