ಮಮತಾ ಜಿ. ಸಾಗರ
ಮೂಲತಃ ಬೆಂಗಳೂರಿನವರೇ ಆದ ಕವಯತ್ರಿ ಮಮತಾ ಜಿ. ಸಾಗರ್ ಅವರು ಜನಿಸಿದ್ದು 1966 ಜನವರಿ 19ರಂದು. ತಾಯಿ ಎಸ್.ಶೇಖರಿಬಾಯಿ, ತಂದೆ ಎನ್.ಗಿರಿರಾಜ್. ಕಾಲೇಜು ದಿನಗಳಿಂದಲೂ ಕನ್ನಡ ಸಾಹಿತ್ಯದಲ್ಲಿ ಅತೀವ ಆಸಕ್ತಿಯಿದ್ದ ಮಮತಾ ಅವರು ಹಲವಾರು ಕವಿಗೋಷ್ಠಿಗಳಲ್ಲಿ ಕವನ ರಚಿಸಿ ವಾಚಿಸಿದ್ದಾರೆ. ಪ್ರಸ್ತುತ ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ವಿಭಾಗದಲ್ಲಿ ಪ್ರಾಧ್ಯಾಪಕಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಇವರು ಬರೆದಿರುವ ಪ್ರಮುಖ ಕವನ ಸಂಕಲನಗಳೆಂದರೆ ಕಾಡ ನವಿಲಿನ ಹೆಜ್ಜೆ, ನದಿಯ ನೀರಿನ ತೇವ ಮುಂತಾದವು.
More About Author