Story/Poem

ಮಧು ಬಿರಾದಾರ

ಮಧು ಬಿರಾದಾರ ಅವರು ಮಹಾರಾಷ್ಟ್ರದ ಸಾಂಗಲಿ ಜಿಲ್ಲೆಯ ಜತ್ತ ತಾಲೂಕಿನ ಸುಸಲಾದ ಗ್ರಾಮದವರು. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಕನ್ನಡ ಸ್ನಾತಕೋತ್ತರ ಪದವಿ ಪಡೆದುಕೊಂಡಿದ್ದಾರೆ. ಸದ್ಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ ಕಲಬುರಗಿಯಲ್ಲಿ, "ಜಾಗತಿಕ ಕಾವ್ಯದ ಕನ್ನಡ ಅನುವಾದಗಳು: ತಾತ್ವಿಕ ಅಧ್ಯಯನ " ವಿಷಯ ಕುರಿತು ಸಂಶೋಧನೆ ಮಾಡುತ್ತಿದ್ದಾರೆ. ಸಂಚಯ‌ ಮತ್ತು ಸಂಕ್ರಮಣ ಕಾವ್ಯ ಬಹುಮಾನ ಹಾಗೂ ಕ್ರೈಸ್ಟ್ ಕಾಲೇಜ್ ದ.ರಾ. ಬೇಂದ್ರೆ ಕವನ ಸ್ಪರ್ಧೆಯಲ್ಲಿ ಆರು ಭಾರಿ ಬಹುಮಾನಿತರು. "‌ಕಾಲದ ರಶೀದಿ ಪುಟ" ಪ್ರಕಟಿತ ಕವನ ಸಂಕಲನ. ಈ ಸಂಕಲನವು ಗುಲ್ಬರ್ಗಾ ವಿಶ್ವವಿದ್ಯಾಲಯ ಕೊಡಮಾಡುವ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನವಾಗಿದೆ.

More About Author

Story/Poem

ಭವದ ಅವಕಾಳಿ

ಬೊಳೆತನದ ಬೋಳುಬೋಳಾದ ಬೆದರ ಗೊಂಬೆ ಮಹಾ ಭಾರದ ಬಾಲ ಹಿಡಿದು  ವಚನ ಪಚನಿಸದೆ ಫತರಗುಟ್ಟುತ್ತ ಅಂಗಾಲ ಬೆವರು ಕ್ಷಣ ಕಾಲ ಸಂದರ್ಭಕ್ಕೊಂದು ಅರಭಿ ಮಲ್ಮಲ ಕನ್ನಡಕವಿಲ್ಲದೆ ಕನ್ನಡಕವಾದ ಕಣ್ಣು ಮುಲಾಜಿನ ಹೊಟ್ಟೆಯ ಮೇಲೆ ಕೈಯಾಡಿಸಿ ಗಿರಮಿಟ್ಟಿ ಬಾಯಿಗೆ. ಭವದ ಅವಕಾಳಿ ಮೋಡ ಚಲ್ಲಾಪಿಲ್...

Read More...