ಕನ್ನಡದಲ್ಲಿ ನವ್ಯಕಾವ್ಯಕ್ಕೆ ನಾಂದಿ ಹಾಡಿದ ಮೊಗೇರಿ ಗೋಪಾಲಕೃಷ್ಣ ಅಡಿಗ ಅವರನ್ನು ‘ಒಂದು ಜನಾಂಗದ ಕಣ್ಣು ತೆರೆಸಿದ ಕವಿ’ ಎಂದು ಗುರುತಿಸಲಾಗುತ್ತಿತ್ತು. ಅಡಿಗರು 1918ರ ಫೆಬ್ರುವರಿ 18ರಂದು ಜನಿಸಿದರು. ತಂದೆ ರಾಮಪ್ಪ ಮತ್ತು ತಾಯಿ ಗೌರಮ್ಮ.
ನೆಲ ಸಪಾಟಿಲ್ಲ : ಹೊಳೆ, ಕೆರೆ, ಬಾವಿ, ಹಳ್ಳ, ಕೊಳ್ಳ,
ಗೊಬ್ಬರ ಗುಂಡಿ - ಹೀಗೆ
ತಗ್ಗುಗಳು, ಏರುಗಳು, ಮುಗ್ಗರಿಸುವುದು ಸಹಜ.
ತಗ್ಗುಗಳಲ್ಲಿ ನೀರು ತುಂಬುತ್ತದೆ. ಸಕಲ ಕುಂಡೀ ತೀರ್ಥ
ಯಾರಿಗೂ ಬೇಡ. ಹರಿವ ನೀರೆಂಥದೇ ಇರಲಿ ಯಾವುದೇ
ಅಭ್ಯಂತರಗಳಿಲ್ಲ.
ಬಾವಿಯ ನೀರು ಕುಡಿಯಲಾಗುತ್ತದೆ, ಕ...