Story/Poem

ಎಚ್.ಎಸ್. ಶಿವಪ್ರಕಾಶ್

ಕವಿ, ಸಾಹಿತಿ, ಲೇಖಕ ಎಚ್.ಎಸ್.ಶಿವಪ್ರಕಾಶ್ ಬೆಂಗಳೂರಿನಲ್ಲಿ 15-06-1954ರಂದು ಜನಿಸಿದರು. ತಂದೆ ಪ್ರಸಿದ್ಧ ಸಾಹಿತಿಗಳು ಮತ್ತು ಕನ್ನಡ ಪರಿಷತ್ತಿನ ಅಧ್ಯಕ್ಷರು ಆಗಿದ್ದ ಶಿವಮೂರ್ತಿ ಶಾಸ್ತ್ರಿಗಳು.  ನವದೆಹಲಿಯ ಜೆ.ಎನ್.ಯು ವಿಶ್ವವಿದ್ಯಾಲಯದ ಸ್ಕೂಲ್ ಆಫ್ ಆರ್ಟ್ಸ್ ಅಂಡ್ ಈಸ್ತೆಟಿಕ್ಸ್ನಲ್ಲಿ ಪ್ರೋಫೆಸರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕಾವ್ಯ, ನಾಟಕ, ಅನುವಾದ ಹೀಗೆ ಸಾಹಿತ್ಯದ ಹಲವು ಪ್ರಕಾರಗಳಲ್ಲಿ ಕೃಷಿ ಮಾಡಿರುವ ಶಿವಪ್ರಕಾಶರು ತಮ್ಮ ನಾಟಕ ಮಹಾಚೈತ್ರೆ ರಚನೆಯಿಂದಾಗಿ ಸಾರ್ವಜನಿಕ ವಿರೋಧ ಎದುರಿಸುವಂತಾಯಿತು. ಅವರ ಪ್ರಮುಖ ನಾಟಕಗಳು- ಮಹಾಚೈತ್ರ, ಸುಲ್ತಾನ್ ಟಿಪ್ಪು, ಮಂಟೇಸ್ವಾಮಿ, ಮಾದರಿ ಮಾದಯ್ಯ, ಮದುವೆ ಹೆಣ್ಣು. ಶಿವಪ್ರಕಾಶರ ಕವನ ಸಂಕಲನಗಳು- ಮಳೆ ಬಿದ್ದ ನೆಲದಲ್ಲ, ಮಿಲರೇಪ, ಅಣುಕ್ಷಣ ಚರಿತೆ, ಸೂರ್ಯಜಲ, ಮಳೆಯೇ ಮಂಟಪ. ಅವರ ಅನುವಾದಿತ ಕೃತಿ- ಕಿಂಗ ಲಿಯರ್ ಸೇರಿದಂತೆ ಹಲವಾರು ಕೃತಿಗಳನ್ನು ರಚಿಸಿದ್ದಾರೆ. 

More About Author

Story/Poem

ತೋಟದಲ್ಲಿ

ಹೇಗೆ ಕೂಡಿದವು ಹಸಿರೆಲೆ ಹೀಗೆ ಹಳದಿಯೆಲೆ ಜೊತೆ ಆಶ್ಚರ್ಯ ಚಿಗುರುಗಳಿಗೆ ಹಸಿರೆಲೆಗಳ ನಡುವೆ ಒಬ್ಬೊಂಟಿ ಹಳದಿ ತಿರುಗಿ ಕೊನೆಗೆ ಕಾಯುವುದು ಮಪ್ಪು ತೀರಾ ಕಷ್ಟ ಮಾಗಿ ಬಿಸಿಲಲ್ಲಿ ಹಳದಿ ಹೂ, ಹಳದಿ ಚಿಟ್ಟೆ, ಒಂದೋ ಎರಡೋ ಕಷ್ಟ ಹೇಳುವುದು ವಿದೇಶೀ ಕಣಿವೆಯಲ್ಲಿ ನಾ ಕಿತ್ತ ಪುಟ್...

Read More...

ಮತ್ತೆ ನೀ ಹುಟ್ಟುವುದು

ಹೋಗು ದಕ್ಷನ ಮಗಳೆ ನೀನು ತಿರುಗಿ ಬರುವೆ ಅಂತ ಕರಗದೆ ಕಾಯುತ್ತವೆ ಈ ನೂರು ಮಂಜಿನ ಬೆಟ್ಟ ಅಲ್ಲಿ ಕೊರೆವ ಗವಿ ಕತ್ತಲಿನಲ್ಲಿ ಅರಳುತ್ತಲೇ ಇರುತ್ತವೆ ನೀಲಿ ಮಂಜು ತಾವರೆ ಕೈಯ ಕೊಳ್ಳಿ ಮಾಡಿ ಜೀವದೆಣ್ಣೆ ಬತ್ತಿ ದೀಪಗಳ ಉರಿಸುತ್ತ ಕಣ್ಣಲ್ಲಿ ಸುತ್ತ ನಿನ್ನ ಬರವಿನ ಹಗಲು ಇರುಳಿನ ಗೆಜ್...

Read More...