Story/Poem

ಎಚ್. ಎನ್. ಆರತಿ

ದೂರದರ್ಶನ ಕೇಂದ್ರದಲ್ಲಿ ಕಾರ್ಯಕ್ರಮ ನಿರ್ಮಾಪಕರಾಗಿ ಕಾರ್ಯ ನಿರ್ವಹಿಸುತ್ತಿರುವ ಎಚ್‌.ಎನ್‌. ಆರತಿ ಅವರು ಕವಿ, ಪತ್ರಕರ್ತೆ. ಅವರು 1966ರ ನವೆಂಬರ್ 13 ರಂದು ಬೆಂಗಳೂರಿನಲ್ಲಿ ಜನಿಸಿದರು. ತಂದೆ ಖ್ಯಾತ ಸಂಶೋಧಕ ಹಂಪ ನಾಗರಾಜಯ್ಯ, ತಾಯಿ ಲೇಖಕಿ ಕಮಲಾ ಹಂಪನಾ.  ಬೆಂಗಳೂರಿನಲ್ಲಿಯೇ ಪ್ರಾಥಮಿಕ ಶಿಕ್ಷಣ ಪಡೆದ ಅವರು 2 ಚಿನ್ನದ ಪದಕದೊಂದಿಗೆ ಸ್ನಾತಕೋತ್ತರ ಪದವಿ ಪೂರೈಸಿದರು. ದೂರದರ್ಶನದಲ್ಲಿ ಜನಪ್ರಿಯವಾಗಿರುವ ‘ಥಟ್ ಅಂತ ಹೇಳಿ!?’ ರಸಪ್ರಶ್ನೆ ಕಾರ್ಯಕ್ರಮವನ್ನು ಆರಂಭಿಸಿ, 2500 ಸಂಚಿಕೆಗಳನ್ನು ನಿರ್ದೇಶಿಸಿದ ಕೀರ್ತಿ ಆರತಿ ಅವರಿಗೆ ಸಲ್ಲುತ್ತದೆ.

More About Author

Story/Poem

ನೀನು ಹೋದ ಮೇಲೆ...

ನೀನು ಬಿಟ್ಟು ಹೋದ ಮೇಲೆ ನೀನಿರದ ಘಳಿಗೆಗಳೆಲ್ಲಾ ಪ್ರಶ್ನೆಗಳಾಗಿ, ಅರ್ಥವಿರದ ಆಕರ್ಷಕ ಟಿಕ್-ಟಾಕ್ ಗಳಂತೆ, ಒಬ್ಬರಿಗೊಬ್ಬರು ಅಂಟಿಕೊಂಡ ಸ್ಟೇಟಸ್ ಗಳಾಗಿ, ನಿಮಿಷ ಗಂಟೆ ದಿನಗಳನ್ನು ಜಗಿದು ಸಿಗಿದು ನುಂಗಿ ಹಾಕುತ್ತಿವೆ. "ನಖಶಿಖಾಂತ" ಎನ್ನುವುದು ಉರಿವ ಸಿಟ್ಟು ಮಾ...

Read More...

ಬಾಯ್ ಫ್ರೆಂಡ್ ಬಾಡಿಗೆಗೆ ಸಿಗುತ್ತಾರೆ!

  ಕ್ಯಾಂಡಿಕ್ರಷ್ ಆಟದಂತೆ ಹೊಸ ಆ್ಯಪ್! ಬಾಯ್ ಫ್ರೆಂಡ್ ಬಾಡಿಗೆಗೆ ಸಿಗುತ್ತಾರಂತೆ. ಅದಕ್ಕೇ ನನಗೀಗ ಅರ್ಜೆಂಟಾಗಿ ಬಾಯ್ ಫ್ರೆಂಡ್ ಬೇಕಾಗಿದೆ. ಇಂಥ ಜಾತಿ ಗೋತ್ರ, ಇಷ್ಟು ವರಮಾನ ಸೂತ್ರ, ಇವೆಲ್ಲಾ ಹಸೆಮಣೆಗೆ ಮಾತ್ರ. ಇದು ಬಾಯ್ ಫ್ರೆಂಡ್ ಜ಼ಮಾನ ಬಿಂಕ ಬಿಗುಮಾನ ಬೇಡ ಸ್ಟಾ...

Read More...