ಗೊರೂರು ಅನಂತರಾಜು
ಹಾಸನ ಜಿಲ್ಲೆಯ ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಕ್ಷೇತ್ರದ ಚಿರಪರಿಚಿತರಾದ ಗೊರೂರು ಅನಂತರಾಜು ಸಾಹಿತಿಯಾಗಿ, ನಾಟಕಕಾರರಾಗಿ, ರಂಗಭೂಮಿಯ ಕಲಾವಿದರಾಗಿ, ಹವ್ಯಾಸಿ ಪತ್ರಕರ್ತರಾಗಿ ಪ್ರಸಿದ್ದಿ ಪಡೆದವರು.ಇವರು ಹುಟ್ಟಿ ಬೆಳೆದದ್ದು ಗೊರೂರು ಗ್ರಾಮದಲ್ಲಿ. 13-05-1961 ಜನಿಸಿದ ಇವರ ತಂದೆ ಬಸವರಾಜು ಮತ್ತು ತಾಯಿ ಪುಟ್ಟಲಕ್ಕ್ಷ್ಮಮ್ಮ . ಪ್ರಾಥಮಿಕ ಶಿಕ್ಷಣದಿಂದ ಪದವಿಪೂರ್ವ ಶಿಕ್ಷಣದವರೆಗೆ ಸ್ವಗ್ರಾಮ ಗೊರೂರಿನಲ್ಲಿ ವಿದ್ಯಾಭ್ಯಾಸ ಮಾಡಿದ ಇವರು ಹಾಸನದ ಸರ್ಕಾರಿ ಕಲಾ ಕಾಲೇಜಿನಲ್ಲಿ ಬಿಕಾಂ ಪದವಿಯನ್ನು ಪಡೆದು ಹೇಮಾವತಿ ನೀರಾವರಿ ನಿಗಮದಲ್ಲಿ ಗುಮಾಸ್ತರಾಗಿ ಕರ್ತವ್ಯ ನಿರ್ವಹಿಸುತ್ತಲೇ ಹಾಸನದ ಕೃಷ್ಣ ಸಂಜೆ ಕಾಲೇಜಿನಲ್ಲಿ ಎಲ್‌ಎಲ್‌ಬಿ ಪದವಿ ವ್ಯಾಸಂಗ ಮಾಡಿದ್ದಾರೆ. ಪ್ರಥಮ ಧರ್ಜೆ ಲೆಕ್ಕಸಹಾಯಕರಾಗಿ ಸೇವೆಸಲ್ಲಿಸಿ ನಿವೃತ್ತರಾಗಿ ಪ್ರಸ್ತುತ ಹಾಸನದ ಹುಣಸಿನಕೆರೆ ಬಡಾವಣೆಯಲ್ಲಿ ನೆಲೆಸಿದ್ದಾರೆ. ಕವನ ಸಂಕಲನಗಳು, ಕಥಾ ಸಂಕಲನಗಳು, ಹಾಸ್ಯ ಸಾಹಿತ್ಯ, ಲೇಖನಗಳು, ನಾಟಕಗಳು, ಕಿರು ಪ್ರಹಸನಗಳು, ವ್ಯಕ್ತಿ ಚಿತ್ರಗಳು, ನವ ಸಾಕ್ಷರರಿಗಾಗಿ ಪುಸ್ತಕಗಳು, ವಿಮರ್ಶಾ ಲೇಖನಗಳು ಹೀಗೆ ಐವ್ವತ್ತಕ್ಕೂ ಹೆಚ್ಚು ಕೃತಿಗಳನ್ನು ಬರೆದು ಪ್ರಕಟಿಸಿದ್ದಾರೆ.
More About Author