Story/Poem

ಫರ್ಹಾನಾಜ್ ಮಸ್ಕಿ

ಕವಯತ್ರಿ ಫರ್ಹಾನಾಜ್ ಮಸ್ಕಿ ಅವರು ಮೂಲತಃ ರಾಯಚೂರು ಜಿಲ್ಲೆಯ ಮಸ್ಕಿಯವರು. ಪ್ರಸ್ತುತ , ಹುಳಿಯಾರಿನ ಬಿಎಂಎಸ್ ಸರ್ಕಾರಿ ಪದವಿ ಕಾಲೇಜಿನಲ್ಲಿ ಅರ್ಥಶಾಸ್ತ್ರದ ಸಹಾಯಕ ಪ್ರಾಧ್ಯಾಪಕಿ. ಕನ್ನಡ ಪುಸ್ತಕ ಪ್ರಾಧಿಕಾರದ ಯುವ ಬರಹಗಾರರ ಚೊಚ್ಚಲ ಕೃತಿ ಯೋಜನೆ ಅಡಿ, ಅವರ ‘ಮೌನ ಮನದ ಮಾತುಗಳು ’ (ಕವನ ಸಂಕಲನ)  ಪ್ರಕಟಗೊಂಡಿದೆ. ವಿದ್ಯಾರ್ಥಿ ಜೀವನದಿಂದಲೇ ಆಲ್ ಇಂಡಿಯಾ ರೇಡಿಯೋ ದಲ್ಲಿ ಕವನ, ಲೇಖನ, ರೆಕಾರ್ಡಿಂಗ್ ಮತ್ತು ಅಗ್ನಿ ಅಸ್ತ್ರ ಪತ್ರಿಕೆಯಲ್ಲೂ ಅಂಕಣಗಾರ್ತಿಯಾಗಿ ಬರವಣಿಗೆಯಲ್ಲಿ ತೊಡಗಿಸಿಕೊಂಡಿರುತ್ತಾರೆ. ಹಲವು ಆನ್‌ಲೈನ್‌ ಸಾಹಿತ್ಯಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದಾರೆ. 

More About Author

Story/Poem

ಪ್ರೇಮವೆಂದರೆ....

ಪ್ರೇಮವೆಂದರೆ... ಅಕ್ಕ ಮಹಾದೇವಿಗೆ ಚೆನ್ನಮಲ್ಲಿಕಾರ್ಜುನ ಮೀರಾ ಬಾಯಿಗೆ ಶ್ರೀ ಕೃಷ್ಣ ಪರಮಾತ್ಮ ಅದೆಂಥ ಅಪೂರ್ವ ಲೀಲೆ ಪ್ರೀತಿಯ ಸಕಲರೂಪ, 'ಹೆಣ್ಣು' ಬಯಸಿದ್ದೆಲ್ಲಾ ದೈವದಿಂದಲೇ! ಪವಿತ್ರ, ಪ್ರಾಮಾಣಿಕ, ನಿಶ್ಕಲ್ಮಶ, ನಿಸ್ವಾರ್ಥ, ದೈವೀ ಸ್ವರೂಪದ ಹೋಲಿಕೆಗೆ ಲೌಕಿಕ ...

Read More...