ಗಾಂಧಿ ಕಸ್ತೂರಬಾ ತಲೆ ತುಂಬಿಕೊಂಡು
ಒಂದೇ ಮಾತರಂ ಹಾಡಿ ಬೀದಿ ಬೀದಿ ಸುತ್ತಿದಳು
ಅಡುಗೆ ಕಲಿ ಎಂದು ಅವಳ ಅಮ್ಮ ಕರೆದಾಗ
ಪುಸ್ತಕ ಹಿಡಿದು ತಲೆಮರಿಸಿಕೊಂಡಲು.
ಅಡುಗೆ ಮನೆಯಲ್ಲಿ ಕಾದಂಬರಿಯ ಕನಸು
ಮಕ್ಕಳನು ಹೆರುವಾಗ ಕವಿತೆ ಹೆಣೆಯುವ ಗುಂಗು
ಅಗ್ಗದ ವ್ಯವಹಾರದಲ್ಲಿ ಜಗವೆಲ್ಲ ಮುಳುಗಿರಲು...
ಮೂರುಕಾಸಿನ ಜೋಪಾನಕ್ಕೆ
ಆರುಕಾಸು ಖರ್ಚು ಮಾಡಿ ಕಟ್ಟಿದ ಮನೆ
ಹಾವಾಗಿ ಸುತ್ತಿಕೊಳ್ಳುವ ಸಂಬಂಧಗಳು
ಕೋಪದ ದಳ್ಳುರಿ
ಅಸಹಾಯಕತೆಯ ಮಿಡುಕು
ಅಷ್ಟಿಷ್ಟು ನಗೆ ಆವಿ ಹೊಗೆ
ಹೊಳೆಯುವ ಚಂದ್ರ-ರಸ್ತೆಯಲ್ಲಿ ಬಿದ್ದರೂ
ಯಾರೂ ಕದ್ದೊಯ್ಯದ ಚಿನ್ನದ ಪದಕ
ಹದಿನಾರರ ಹುಡುಗಿಯ ಕೆನ್ನೆಗೆಂಪಿನಂತೆ
ಅರ...