Story/Poem

ದೀಪ್ತಿ ಭದ್ರಾವತಿ

ದೀಪ್ತಿ ಭದ್ರಾವತಿ -ದಕ್ಷಿಣ ಕನ್ನಡದ ಮರವಂತೆ ಮೂಲದವರು. ಚಿಕ್ಕಮಂಗಳೂರಿನ ನಕ್ಕರಿಕೆ ಎಂಬ ಕುಗ್ರಾಮದಲ್ಲಿ ಹುಟ್ಟಿದ್ದು, ಹೆಸರು ಕೇವಲ ದೀಪ್ತಿ ಮಾತ್ರ ಆದರೆ ಭದ್ರಾವತಿಯ ಜೊತೆ ಅವಿನಾಭಾವ ಸಂಬಂಧ ಇರುವುದರಿಂದ ಹಾಗೂ ಅವರ ಜೀವನದಲ್ಲಿ ಬಾಲ್ಯದಿಂದ ಯೌವನದವರೆಗೆ ಭದ್ರಾವತಿಯ ಕೊಡುಗೆ ತುಂಬಾ ಇರುವುದರಿಂದ ದೀಪ್ತಿ ಭದ್ರಾವತಿ ಎಂಬ ಹೆಸರಿನಿಂದ ಕಾವ್ಯವನ್ನು ಬರೆಯುತ್ತಾರೆ. ದೀಪ್ತಿಯವರು ಪತ್ರಿಕೋದ್ಯಮದಲ್ಲಿ ಡಿಪ್ಲೋಮಾ ಪದವೀಧರರು, ಕುವೆಂಪು ವಿಶ್ವವಿದ್ಯಾಲಯದಲ್ಲಿ ಕನ್ನಡ ಸ್ನಾತಕೋತ್ತರ ಪದವಿಯನ್ನೂ ಹಾಗೂ ಹಿಂದಿಯಲ್ಲಿ ವಿಶಾರದ ಪದವಿಯನ್ನು ಪಡೆದಿದ್ದಾರೆ. ಪದವಿಪೂರ್ವದಲ್ಲಿ ವಿಜ್ಞಾನದ ವಿದ್ಯಾರ್ಥಿನಿಯಾಗಿದ್ದ ಇವರಿಗೆ ಸಾಹಿತ್ಯ ಕ್ಷೇತ್ರದ ಆಕರ್ಷಣೆ ಬೇರೆ ಬೇರೆ ಪದವಿಗಳಿಗೆ ಅನುವು ಮಾಡಿಕೊಟ್ಟಿತ್ತು. ಪ್ರಸ್ತುತ ಸರಕಾರಿ ಉದ್ಯೋಗದಲ್ಲಿದ್ದು ಆರೋಗ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.  

More About Author

Story/Poem

ಪದ್ಯ

ನೋಡಿ ನೀವು, ಮಾಡುವುದು ಇದೇ ತಪ್ಪು ಬರೆಯುವುದಿಲ್ಲ ಬಿಚ್ಚಿ,ಹರವಿ,ಕೊಡವಿ ಬಯಲಿಗಿಟ್ಟಂತೆ ಬಯಲಾಗದ್ದನ್ನು ಅಡಗಿಸಿಟ್ಟುಕೊಳ್ಳುತ್ತೀರಿ ಎಲ್ಲ ಎಲ್ಲವನ್ನು ಎಲ್ಲದನ್ನು ಕಣ್ಣೊಳಗೆ,ಎದೆಯೊಳಗೆ ನಾಭಿಯ ಕಣಿವೆಯೊಳಗೆ ಮುಚ್ಚಿಟ್ಟುಕೊಳ್ಳುತ್ತೀರಿ 40ರ ದಶಕದವರಂತೆ ಸಿಡಿಯಬೇಕಿದೆ ಕೊಂಚ...

Read More...