Story/Poem

ಅಕ್ಷಯ ಆರ್. ಶೆಟ್ಟಿ

ಲೇಖಕಿ ಅಕ್ಷಯ ಆರ್. ಶೆಟ್ಟಿ ಅವರು ಪ್ರಸ್ತುತ ಸಹ್ಯಾದ್ರಿ ಇಂಜಿನಿಯರಿಂಗ್ ಮತ್ತು ಮ್ಯಾನೇಜ್ಮೆಂಟ್ ಕಾಲೇಜಿನಲ್ಲಿ ಸಹ ಪ್ರಾಧ್ಯಾಪಕರು.  ಎಂ. ಎ.  ಮತ್ತು ಎಂ. ಬಿ. ಎ.  ಪದವೀಧರರು. ಎರಡು ಕವನ ಸಂಕಲನಗಳನ್ನು ಪ್ರಕಟಿಸಿದ್ದಾರೆ. ಅಕ್ಷಯ ಅವರ ಎರಡನೇ ಕವನ ಸಂಕಲನ "ಬದುಕು ಭಾವದ ತೆನೆ "ಹಸ್ತಪ್ರತಿಗೆ ಜಗಜ್ಯೋತಿ ಕಲಾವೃಂದ ರಾಷ್ಟ್ರ ಮಟ್ಟದಲ್ಲಿ ಆಯೋಜಿಸಿದ್ದ  'ಸುಶೀಲಮ್ಮ ದತ್ತಿ ನಿಧಿ ಪ್ರಶಸ್ತಿ' ಹಾಗೂ ಇವರ ಕಥೆಗಳಿಗೆ 'ತ್ರಿವೇಣಿ ಧತ್ತಿ ನಿಧಿ ಪ್ರಶಸ್ತಿ' ಮತ್ತು ಸಾಧನಾ ಪ್ರತಿಷ್ಠಾನದ 'ಬಾಂಧವ್ಯ ಪ್ರಶಸ್ತಿ'  ಲಭಿಸಿವೆ. ರಾಜ್ಯ ಮಟ್ಟದ ಕವನ ಸ್ಪರ್ಧೆಗೆ ಇವರ  'ಹೆಣ್ಣು ಬಂಗಾರದ ಕಣ್ಣು ' ಕವಿತೆ ಭಾಜನವಾಗಿದೆ.  ಮಂಗಳೂರು ವಿಶ್ವವಿದ್ಯಾನಿಲಯದ ಕನಕದಾಸ ಸಂಶೋಧನಾ ಕೇಂದ್ರ ಪ್ರಕಟಿಸಿದ್ದ 'ಕನಕ  ಚಿಂತನ' ಕೃತಿಯನ್ನು ಸಂಪಾದಿಸಿದ್ದಾರೆ.  'Gender Equity ' ಕುರಿತಂತೆ  ನಾರ್ವೇಯನ್ ವಿದ್ಯಾರ್ಥಿ ನಡೆಸಿದ ಸಂದರ್ಶನ ನಾರ್ವೇಯನ್ ಜರ್ನಲ್ ನಲ್ಲಿ ಪ್ರಕಟಗೊಂಡಿದೆ. ಜಾನಪದ ಸಂಶೋಧನೆ ಇವರ ಮತ್ತೊಂದು ಆಸಕ್ತಿಯ ಕ್ಷೇತ್ರ. ಜಪಾನಿನ ಕ್ಯೂಟೋ ಯೂನಿವರ್ಸಿಟಿಯ ಪ್ರೊಫೆಸರ್ ಮಿಹೋ ಇಶಿ ಅವರ ಜೊತೆ ಜಾನಪದ ಸಂಶೋಧನೆಯಲ್ಲಿ ತೊಡಗಿಸಿಕೊಂಡಿದ್ದಾರೆ.

More About Author

Story/Poem

ಗಾಜಿನ ಮೇಲ್ಛಾವಣಿ -ಎಂಬೊಂದು ರೂಪಕ

ಕೆಲವೊಮ್ಮೆ ನಾನು ಸುಖಿ  ಎಂಬ ಗುಲ್ಲೇ ಸುಖದ್ದು ಸಖಿಯರ ನಡುವೆ  ನಿಜ, ಮಾಡಿನಿಂದ ಸೋರೀತೆಂಬ ಭಯವೇ ಇಲ್ಲ ಛಾವಣಿಯ ಒಳಗೆ  ಹುಲ್ಲು ಹಾಸಿನ ಮೇಲು ಹೊದಿಕೆ  ನೀಡಿತ್ತು ನಿಟ್ಟುಸಿರಿಗೆ ಅವಕಾಶ  ಇಲ್ಲಿ,  ಗಾಜಿನರಮನೆಯಲ್ಲಿ  ಗಾಳಿ ಮಳ...

Read More...