Poem

ಕಥೆಯ ಹೇಳುವುದೇಯಿಲ್ಲ ಅಜ್ಜಿ ಈಗೀಗ..

ಹಾಡುವುದೂಯಿಲ್ಲ, ಕವಳ ಕುಟ್ಟುವಾಗ
ಹಳೇ ಮದುವೆ ಹಾಡೊಂದ..
ತೊಟ್ಟಿಲು ತೂಗುವಾಗ ಜೋಗುಳವ
ಗುನುಗುವುದಿಲ್ಲ, ಬೇಸಿಗೆಯ ಸಂಜೆ
ಮಳೆಬರುವಾಗ ಸಣ್ಣನೆ ಬಿಕ್ಕುತ್ತಾಳೆ..
ಭಾವುಕಳಾಗುತ್ತಾಳೆ ಬಾಳೆ ಎಲೆಯ
ಮುಂದೆ ಊಟ ಮಾಡದೇ ಕುಳಿತು..
ಏನೋ ಯೋಚನೆಯಲ್ಲಿ ಕಳೆದು
ಹೋಗುತ್ತಾಳೆ, ಹೂವ ಕಟ್ಟುವಾಗಲೂ
ಬಿಳಿ ಹೇರಳ ಕಟ್ಟುವಾಗಲೂ..

ದಪ್ಪ ಮೀಸೆಯ ರಕ್ಕಸ ನಗುವುದಿಲ್ಲ
ಕತ್ತಿ ಹಿಡಿದು , ಅಶ್ವವನೇರಿ ಅರಸ
ಬರುವುದೂಯಿಲ್ಲ, ಅಜ್ಜಿ ಈಗೀಗ
ಕಥೆಯ ಹೇಳುವುದೇಯಿಲ್ಲ...!!

- ಸೌಮ್ಯ ಕಾಶಿ

ವಿಡಿಯೋ
ವಿಡಿಯೋ

ಸೌಮ್ಯ ಕಾಶಿ

ಸೌಮ್ಯ ಕಾಶಿ ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನವರು. ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಪತ್ರಿಕೋದ್ಯಮ ಮತ್ತು ಸಮೂಹ ಮಾಧ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿರುತ್ತಾರೆ. ಬರವಣಿಗೆ, ಕವಿತೆಗಳ ರಚನೆ, ಕವನ ವಾಚನ ಅವರ ಆಸಕ್ತಿ ಕ್ಷೇತ್ರ. 

ಕೃತಿಗಳು: ‘ಹೇಳದೇ ಉಳಿದದ್ದು!’(ಕವನ ಸಂಕಲನ)

More About Author