ಕಳೆದು ಹೋಗಿದ್ದೇವೆ ನಾವು
ಆಧುನಿಕ ಯುಗದಲ್ಲಿ
ನಮ್ಮೊಳಗೆ ನಾವು ಇಲ್ಲ
ಸಾಧನೆ, ಹೆಸರು, ಹಣ ಗಳಿಸೋ ನೆಪದಲ್ಲಿ
ಕಳೆದು ಹೋಗಿದ್ದೇವೆ ನಾವು
ಬಾಲ್ಯದಲ್ಲಿ ನಮ್ಮೊಳಗೆ ನಾವು
ನಗು ನಗುತ್ತಾ ಇದ್ವಿ
ದೊಡ್ಡವರಾದ ಮೇಲೆ
ಇನ್ನೊಬ್ಬರ ಬಗ್ಗೆ ಯೋಚಿಸುವುದರಲ್ಲೇ
ದಿನ ಕಳೆಯುತ್ತಾ
ಕಳೆದು ಹೋಗಿದ್ದೇವೆ ನಾವು
ಇನ್ನೊಬ್ಬರ ಬಗ್ಗೆ ದ್ವೇಷ ಅಸೂಯೆ ತುಂಬಿಕೊಂಡು
ನಮ್ಮನ್ನೇ ನಾವು ಮರೆತು
ಪ್ರಗತಿಯ ಭರದಲ್ಲಿ
ಆಸ್ತಿ ಅಂತಸ್ತು ಅನ್ನುತ್ತಾ
ಕಳೆದು ಹೋಗಿದ್ದೇವೆ ನಾವು
ನಮ್ಮೊಂದಿಗೆ ನಾವು ಹೋರಾಡಿ
ನಮ್ಮನ್ನೇ ನಾವು ಗೆಲ್ಲಬೇಕಿದೆ
ಕಳೆದು ಹೋದ ನಮ್ಮನ್ನೇ
ನಾವು ಹುಡುಕಬೇಕಿದೆ
ಮಾನವ ಜನ್ಮ ಸಾರ್ಥಕ ಮಾಡಿಕೊಳ್ಳಲು.
- ರಾಜೇಸಾಬ ಕೆ. ರಾಟಿ, ಬೆದವಟ್ಟಿ
ವಿಡಿಯೋ
ವಿಡಿಯೋ
ರಾಜೇಸಾಬ ಕೆ. ರಾಟಿ
ಕವಿ ರಾಜೇಸಾಬ ಕೆ.ರಾಟಿ ಅವರು ಮೂಲತಃ ಕೊಪ್ಪಳ ಜಿಲ್ಲೆಯ ಕುಕನೂರು ತಾಲ್ಲೂಕಿನ ಬೆದವಟ್ಟಿಯವರು. ಇವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಬೆದವಟ್ಟಿ ಸರಕಾರಿ ಶಾಲೆಯಲ್ಲಿ ಪೂರೈಸಿ ಪ್ರೌಢ ಶಿಕ್ಷಣವನ್ನು ಶಿರೂರದಲ್ಲಿ ಪೂರೈಸಿದ್ದಾರೆ. ನಂತರ ಕುಕನೂರದಲ್ಲಿ ಪಿಯುಸಿ ಮುಗಿಸಿ ನಂತರ ಕೊಪ್ಪಳ ಜಿಲ್ಲೆಯ ಮಂಗಳೂರದಲ್ಲಿ ಡಿ.ಎಡ್. ಮುಗಿಸಿ ಯಲಬುರಗಾದಲ್ಲಿ ತಮ್ಮ ಬಿ.ಎ ಪದವಿ ಪಡೆದರು. ಪ್ರಸ್ತುತ ಕೊಪ್ಪಳ ಜಿಲ್ಲೆಯಲ್ಲಿ ಅರಣ್ಯ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತದ್ದಾರೆ.