Poem

ಪುಟದ ಮಾತು

ಬಚ್ಚಿಟ್ಟ ಪದಗಳಿಗೆ
ಪುಟಗಳ ನೀಡಿ
ಬರೆದಿಟ್ಟ ಈ ಪ್ರೀತಿ
ಆಗಾಗ ತನ್ನನ್ನು ಕನ್ನಡಿಯಲಿ ನೋಡಿಕೊಳ್ಳುತ್ತಿತ್ತು
ಆಗಾಗ ಪುಟಗಳಿಗೆ ಭೇಟಿ ನೀಡಿ

ಎಂದಾದರೂ ಎದುರಿಗೆ ಬರಬಹುದೆಂದು
ಉತ್ಸಾಹವ ಪಡೆದುಕೊಳ್ಳುತ್ತಲೆ ಇತ್ತು
ಆ ಕಣ್ಣಿನ ಸಂಯಮ ಭಾಷೆಯ
ಈಗಲೂ ನೋಡಿ ಉತ್ಸುಕನಾಗುವಂತೆ

ಮಾತುಗಳ ಸರಮಾಲೆಯಲಿ
ಯಾವುದೇ ಹೇಳಿಕೆಗಳು ಸರಿ ಹೊಂದದಿರುವಾಗ
ಇಲ್ಲಿ ಆ ತರಹದ್ದು ಯಾವುದು ಇಲ್ಲ ಎಂದು ಸುಮ್ಮನಿರದೆ
ಮಾತುಗಳಾಡಿ ನೆನಪಿಸಿತ್ತು ಮತ್ತೆ ಜೀವಿಸುವಂತೆ

ಬರಿ ದಾರಿಯಲಿ ಕಳೆದೆ ಹೋಗುತ್ತಿತ್ತು
ಅಕ್ಕ ಪಕ್ಕದ ಆಸನದ ಆವಾಸ
ಈಗಲೂ ಆ ಪರಿಯ ನೋಡಲು
ಹೃದಯ ತವಕಿಸುತಿದೆ
ಆದರೆ ಹೃದಯ ತನ್ನ ಕಿಟಕಿಯ ಮುಚ್ಚಿ

ಬದುಕು ಭಾವಗಳ ಹಂಚಿಕೆಯ
ಪುರುಸೊತ್ತು ತುಸು ಕಮ್ಮಿ ಈಗ
ದುರ್ಗದ ಬಳಿ ಕೂತು
ಪ್ರೀತಿ ಕತೆ ಕೇಳಲು ಮರುಗುತ್ತಿತ್ತು ಮನವು
ಕೈ ಕಾಲುಗಳೆಲ್ಲ ನಡುಗುತ್ತಿತ್ತು
ನಿನ್ನನ್ನೇ ನಾ ಎದುರು ನೋಡಲು

ಪುಟದಲ್ಲಿ ಬರೆದಿದ್ದ
ಪ್ರೀತಿ ಪ್ರತೀತಿಯ ಸಾಲು
ಪರಸ್ಪರ ಸಂಧಿಸಿತ್ತು ಹೃದಯ ಸ್ನಾಯುಗಳಿಗೆ
ಪ್ರಸಾರ ಮಾಡದೆ ಹೇಳಿತ್ತು
ಇಲ್ಲಿಗೆ ಸಮಾಧಾನಿಸು ಎಂದು
ಯಾವ ಪುಟವ ತೆರೆದರು
ಅಣಕಿಸುತಲಿತ್ತು ಸಾಕು ಪುಟವ ಮುಚ್ಚು ಇನ್ನು ಎಂದು

~ಶ್ರೀಧರ ಜಿ ಯರವರಹಳ್ಳಿ.

ಶ್ರೀಧರ ಜಿ ಯರವರಹಳ್ಳಿ

ಶ್ರೀಧರ ಜಿ ಯರವರಹಳ್ಳಿ ಮೂಲತಃ ತುಮಕೂರು ಜಿಲ್ಲೆಯ ಶಿರಾ ತಾಲ್ಲೂಕಿನವರು. ಬಿ ಎಸ್ ಸಿ ಪದವೀಧರರಾಗಿರುವ ಅವರು ಈಗ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸಾಹಿತ್ಯ ಕ್ಷೇತ್ರದಲ್ಲಿ ಒಲವಿರುವ ಅವರಿಗೆ ಬರವಣಿಗೆ, ಓದುವುದು ಹವ್ಯಾಸವಾಗಿದೆ. ಅವರ ಕೆಲವು ಲೇಖನಗಳು ಪತ್ರಿಕೆಗಳಲ್ಲಿ ಪ್ರಕಟವಾಗಿರುತ್ತದೆ.

More About Author