ಯಕ್ಷಗಾನ ಕಲೆಯ ಒಳಹೊಕ್ಕವನಿಗೆ ಕರ್ಣ, ರಾವಣ, ಕಂಸ, ಮಾಗಧರು ಹೊಸಬರಲ್ಲ


“ಕರ್ಣನಿಗೆ ತಾನು ತಪ್ಪುಮಾಡಿದ್ದೇನೆ ಎಂದು ಗೊತ್ತಾಗುವುದನ್ನು ಓದುಗನಿಗೆ ಬರೆಯುವ ಮನೋಧರ್ಮ ಬಹಳ ಸೆಳೆಯುತ್ತದೆ, ನಾವೂ ನಮ್ಮ ಬದುಕಿನಲ್ಲಿ ಮಾಡಿರುವ ತಪ್ಪುಗಳನ್ನು ನೆನಪಿಸುತ್ತದೆ”, ಎನ್ನುತ್ತಾರೆ ಮನೋಹರ ಉಪಾಧ್ಯ ಅವರು ರಾಧಾಕೃಷ್ಣ ಕಲ್ಚಾರ್‌ ಅವರ “ಕವಚ” ಕೃತಿಗೆ ಬರೆದ ವಿಮರ್ಶೆ.

ತಾಳಮದ್ದಳೆ ಕಲಾವಿದ, ನಿವೃತ್ತ ಅಧ್ಯಾಪಕ ರಾಧಾಕೃಷ್ಣ ಕಲ್ಚರ್ ವಿಟ್ಲ. ಇವರ ಕವಚ ಕಾದಂಬರಿ ಓದಿ ಬಹಳ ಸಮಯವಾಯ್ತು. ಬರೇ ಚೆನ್ನಾಗಿದೆ ಎಂದು ಹೇಳಿದರೆ ಬಾಯಿ ಉಪಚಾರ ಆಗುತ್ತದೆ. ಈಗ ಎರಡನೇ ಮುದ್ರಣ ಕಂಡಿದೆ.

ಯಕ್ಷಗಾನ ಕಲೆಯ ಒಳಹೊಕ್ಕವನಿಗೆ ಕರ್ಣ, ರಾವಣ, ಕಂಸ, ಮಾಗಧರು ಹೊಸಬರಲ್ಲ. ಕರ್ಣನ ಬಗ್ಗೆ ನೂರಾರು ಯಕ್ಷಗಾನ ಪ್ರಸಂಗಗಳನ್ನು ( ಕರ್ಣಪರ್ವ, ಕರ್ಣಾರ್ಜುನ ಕಾಳಗ, ಮಹಾರಥಿ ಕರ್ಣ) ಪದೇ ಪದೇ ನೋಡಿದ್ದರೂ , ಕರ್ಣ ಹೀಗೂ ಇರಬಹುದೆಂಬ ಹೊಸ ನೋಟವನ್ನು ಕವಚವು ಹೊರಹಾಕಿದೆ. ಕವಚದ ವಿಶೇಷವೆಂದರೆ ಯಕ್ಷಗಾನದ ಪ್ರೇಕ್ಷಕ ಮತ್ತು ಕಲಾವಿದರೆಲ್ಲರೂ ಕೂಡ ಓದಲೇ ಬೇಕಾದ ಪುಸ್ತಕ. ಇತರರಿಗೂ ಹೊಸ ಅನುಭವ ಕೊಡಲೇಬೇಕು, ಹಾಗಿದೆ ಪುಸ್ತಕ. ಕರ್ಣನ ಜಾತಿ ಸಮಸ್ಯೆ, ಅಸಹಾಯಕತೆ, ಕೆಚ್ಚು, ದ್ವಂದ್ವ, ಖಳನಾಯಕತ್ವ, ಅಹಂಕಾರ, ದಾನಗುಣ ಇತ್ಯಾದಿಗಳನ್ನೆಲ್ಲ ಸಮಕಾಲೀನ ಬದುಕಿನ ವಿವಿಧ ಮುಖಗಳಾಗಿ ಚಿತ್ರಿಸಿರುವುದು ಪುಸ್ತಕವನ್ನು ಒಮ್ಮೆಲೆ ಓದಿಸುತ್ತದೆ. ಪ್ರಾಥಮಿಕ ಶಾಲಾ ಮಕ್ಕಳಿಗೂ ಅರ್ಥವಾಗುವಂತಿದೆ.

ಕರ್ಣನಿಗೆ ತಾನು ತಪ್ಪುಮಾಡಿದ್ದೇನೆ ಎಂದು ಕರ್ಣನಿಗೆ ಗೊತ್ತಾಗುವುದನ್ನು ಓದುಗನಿಗೆ ಬರೆಯುವ ಮನೋಧರ್ಮ ಬಹಳ ಸೆಳೆಯುತ್ತದೆ, ನಾವೂ ನಮ್ಮ ಬದುಕಿನಲ್ಲಿ ಮಾಡಿರುವ ತಪ್ಪುಗಳನ್ನು ನೆನಪಿಸುತ್ತದೆ. ಕರ್ಣನ ಸಣ್ಣತನ - ದೊಡ್ಡತನವನ್ನು ಒಟ್ಟೊಟ್ಟಿಗೇ ಚಿತ್ರಿಸುವುದೂ ಒಂದು ಸವಾಲೇ. ನಾಯಕನೂ ಹೌದು, ಖಳನಾಯಕನೂ ಹೌದು, ಜೊತೆಗೆ ಅಸಹಾಯಕತೆ - ಅವಕಾಶ ವಂಚಿತ - ಸಂಧಿಗ್ಧತೆಯ ಜೀವನ ಕ್ರಮವು ರಂಗಭೂಮಿಗೆ ಹೊಸವಸ್ತು. ಮೇಲಾಗಿ ಮನುಷ್ಯನಿಗೆ ಅತಿ ಜನಪ್ರಿಯತೆ ಮತ್ತು ಅತಿ ಮೂದಲಿಕೆ ಎರಡೂ ಮುಳ್ಳು ಅಥವಾ ವಿಷ ಎಂಬ ಪುಸ್ತಕವನ್ನು ಓದಿ ಮುಗಿಸುವಾಗ ಸಿಗುವ ಅನುಭವವು ಅದು ಪುಸ್ತಕ - ಬರಹಗಾರನ ಸಾಮರ್ಥ್ಯ.

- ಮನೋಹರ್ ಉಪಾಧ್ಯ

MORE FEATURES

ಇಲ್ಲಿಯ ಕತೆಗಾರ್ತಿಯ ಶಕ್ತಿಯೆಂದರೆ ಭಾಷೆಯೆ…

16-11-2024 ಬೆಂಗಳೂರು

“ಈ ಕಥೆಗಳನ್ನು ಓದಿದೆ. ಈ ಕಥೆಗಳ ಸಹಜತೆಗೆ ತೆರೆದ ಮನ ಮಗ್ನತೆಯಿಂದ ಓದಿಸಿಕೊಂಡು ಹೋಗುವಂತೆ ಮಾಡಿತು. ಓದಿದ ಮೇಲೆ ...

ವ್ಯಕ್ತಿಯದು ದೈಹಿಕ ಪಯಣವಾದರೆ ವ್ಯಕ್ತಿತ್ವದ್ದು ಸಾಮಾಜಿಕ ಪಯಣ

15-11-2024 ಬೆಂಗಳೂರು

“ವಿಶ್ವ ಕಂಡ ಖ್ಯಾತ ಚಿಂತಕ ಕಾರ್ಲ್‌ಮಾರ್ಕ್ಸ್ ಮತಧರ್ಮವನ್ನು 'ಹೃದಯ ಹೀನ ಜಗತ್ತಿನ ಹೃದಯ' ಎಂದು ಹ...

ನನಗೆ ಅನಿಸಿದ ಪ್ರಕಾರ ಬರವಣಿಗೆ ಒಂದು ಕನಸು

15-11-2024 ಬೆಂಗಳೂರು

“ಈಗಾಗಲೇ ಹೇಳಿದ ಹಾಗೆ ನನ್ನ ಸಾಹಿತ್ಯ ಕೃಷಿಯ ಬೀಜಾಂಕುರವಾದದ್ದು ಹಾಗೂ ನನ್ನ ಇಂಗ್ಲಿಷ್ ಭಾಷಾ ಬೋಧಕ ವೃತ್ತಿಗೆ ಭದ...