“ಇವರ ಕನ್ನಡ ಸಾಹಿತ್ಯದ ಗಣಿಗೆ ಬೆಲೆಬಾಳುವ ಕೃತಿ, ಲೇಖನ, ಅಂಕಣ ಬರಹ, ಅನುವಾದ ಸಾಹಿತ್ಯ, ಜೀವನ ಚರಿತ್ರೆ, ವಿಚಾರ ಸಾಹಿತ್ಯ, ಲಲಿತ ಪ್ರಬಂಧ ಮತ್ತು ಅಂಕಣ ಬರಹ ಕ್ಷೇತ್ರಕ್ಕೆ ಇವರ ಕೊಡುಗೆ ಅಪೂರ್ವವಾದದ್ದು” ಎನ್ನುತ್ತಾರೆ ಶರಣಬಸಪ್ಪ ವಡ್ಡನಕೇರಿ. ಅವರು ಮಹಾದೇವಿ ಹೆಬ್ಬಾಳೆ ಅವರ ’ವೀರೇಂದ್ರ ಸಿಂಪಿ’ ವಾಚಿಕೆ 6 ರ ಕುರಿತು ಬರೆದ ಅನಿಸಿಕೆ.
ಕಲ್ಯಾಣ ಕರ್ನಾಟಕದ ಸೃಜನಶೀಲ ಸಾಹಿತಿಗಳು ಕನ್ನಡ ಸಾಹಿತ್ಯದ ಎಲ್ಲಾ ಪ್ರಕಾರಗಳಲ್ಲಿ ಕೃತಿಗಳನ್ನು ರಚಿಸಿ, ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಈ ಸಾಹಿತಿಗಳ ಕೃತಿಗಳು ಕನ್ನಡ ಓದುಗರಿಗೆ ಉಪಲಬ್ಧವಿರುವುದಿಲ್ಲ. ಈ ಲೇಖಕರು ರಚಿಸಿದ ಎಲ್ಲಾ ಸಾಹಿತ್ಯದ ಮೊತ್ತ ಸಾವಿರ ಪುಟಗಳಷ್ಟಾಗುತ್ತದೆ. ಅಷ್ಟನ್ನೂ ಮುದ್ರಿಸುವುದು ಕಷ್ಟಕರ. ಈ ದಿಸೆಯಲ್ಲಿ ನಮ್ಮ ಪ್ರಕಾಶನದಿಂದ ಸಾಹಿತಿಗಳ ವಾಚಿಕೆಗಳನ್ನು ಹೊರತಂದು, ಅವರ ಸಾಹಿತ್ಯದ ಸ್ವಾದವನ್ನು ಕನ್ನಡಿಗರಿಗೆ ಉಣಬಡಿಸಿ ಕನ್ನಡಿಗರ ಹೃನ್ಮನಗಳನ್ನು ಅರಳಿಸುವಂತಾಗಬೇಕೆನ್ನುವುದು ಕಲಬುರಗಿಯ ಶ್ರೀ ಸಿದ್ದಲಿಂಗೇಶ್ವರ ಪ್ರಕಾಶನದ ಸದಿಚ್ಛೆಯಾಗಿದೆ. ಸುವರ್ಣ ಕರ್ನಾಟಕ ನಾಮಕರಣ ಸಂಭ್ರಮಾಚರಣೆ ಸಂದರ್ಭದಲ್ಲಿ, ಕನ್ನಡ ಸಾಹಿತ್ಯದಲ್ಲಿ ಅಹರ್ನಿಶಿ ಸೇವೆಗೈದ ಹಲವು ಹಿರಿಯ ಮತ್ತು ಕಿರಿಯ ಸಾಹಿತಿಗಳ ವಾಚಿಕೆಗಳನ್ನು ಹೊರತಂದು ಕನ್ನಡ ಓದುಗರ ಮಡಿಲಿಗೆ ಅರ್ಪಿಸುವ ಸದಿಚ್ಚೆಯಾಗಿದೆ.
ಈ ಸದಿಚ್ಛೆ ನೆರವೇರುವಲ್ಲಿ ಡಾ. ಮಹಾದೇವಿ ಹೆಬ್ಬಾಳೆ ಯವರು ಪ್ರೊ. ವೀರೇಂದ್ರ ಸಿಂಪಿಯವರ ಕುರಿತ ಸಮಗ್ರ ಸಾಹಿತ್ಯ ವಾಚಿಕೆ ರೂಪದಲ್ಲಿ ಸಂಪಾದಿಸಿದ್ದಾರೆ.ವೀರೇಂದ್ರ ಸಿಂಪಿಯವರಿಂದ ರಚಿತವಾದ ಸಾಹಿತ್ಯ ಈ ವಾಚಿಕೆಯಲ್ಲಿ ಅಡಕವಾಗಿದೆ. ಅವರ ಕೃತಿಗಳಿಗೆ ರಾಜ್ಯ ಸಾಹಿತ್ಯ ಅಕಾಡೆಮಿಗಳ ಪ್ರಶಸ್ತಿ ಕೂಡಾ ಲಭಿಸಿದೆ. ಅವರ ಒಟ್ಟು ಸಾಹಿತ್ಯದ ಸಾರಸ್ವತ ಸತ್ವವನ್ನು ಕನ್ನಡ ಓದುಗರಿಗೆ ಈ ವಾಚಿಕೆ ಉಣಬಡಿಸುತ್ತದೆ.
ವೃತ್ತಿಯಲ್ಲಿ ಇವರು ಆಂಗ್ಲ ಭಾಷಾ ಪ್ರಾಧ್ಯಾಪಕರಾಗಿ ಪ್ರವೃತ್ತಿಯಲ್ಲಿ ಸಾಹಿತಿಗಳು, ಇವರ ಕನ್ನಡ ಸಾಹಿತ್ಯದ ಗಣಿಗೆ ಬೆಲೆಬಾಳುವ ಕೃತಿ, ಲೇಖನ, ಅಂಕಣ ಬರಹ, ಅನುವಾದ ಸಾಹಿತ್ಯ, ಜೀವನ ಚರಿತ್ರೆ, ವಿಚಾರ ಸಾಹಿತ್ಯ, ಲಲಿತ ಪ್ರಬಂಧ ಮತ್ತು ಅಂಕಣ ಬರಹ ಕ್ಷೇತ್ರಕ್ಕೆ ಇವರ ಕೊಡುಗೆ ಅಪೂರ್ವವಾದದ್ದು. ಇವರ ಈ ಸಾಹಿತ್ಯ ಬಹುಬೇಗ ಜನರ ಮನ ತಲುಪುವಲ್ಲಿ ಅವರು ಹೊರತಂದ ಲಲಿತ ಪ್ರಬಂಧಗಳೇ ಸಾಕ್ಷಿಯಾಗಿವೆ. ತಾವು ಹುಟ್ಟಿದ ಭೂಮಿ ಬದುಕಿಗಾಗಿ ಆಯ್ಕೆ ಮಾಡಿಕೊಂಡ ನೆಲ, ಸಾಹಿತ್ಯ ಕೃಷಿಗಾಗಿ ಹುಡುಕಿದ ವಿಷಯಗಳ ಹೆಂಟೆ ಇವುಗಳೆಲ್ಲವನ್ನು ಭಾಷಿಕ, ಪ್ರಾದೇಶಿಕದ ಮಟ್ಟಿಗೆ ಅವಲೋಕಿಸಿದಾಗ ಕೌತುಕದ ಸಂಗತಿಗಳು ಸಮ್ಮೋಹನಗೊಳಿಸಿದವು. ನಾವು ಹಿಂದುಳಿದವರು ಎಂಬ ಪದ ಮೆದುಳಿನ ಯಾವುದೋ ಮೂಲೆಯಲ್ಲಿ ಭದ್ರವಾಗಿಟ್ಟುಕೊಂಡ ಜನ ನಾವು. ಅಂತಹ ಸಂದರ್ಭದಲ್ಲಿ ವೀರೇಂದ್ರ ಸಿಂಪಿಯವರು ಒಂದು ಮೈಲುಗಲ್ಲಾಗಿ ನಿಲ್ಲುವರು. ಸುತ್ತಣ ಸಮಾಜ ವ್ಯವಸ್ಥೆ, ಜನಜೀವನ, ವಿಚಾರಶೂನ್ಯರ ಅನಭಿವೃದ್ಧಿಗಳ ಕಡೆಗೆ ನೋಡುವುದೇ ಪ್ರೊ. ವೀರೇಂದ್ರ ಸಿಂಪಿಯವರ ವೈಶಿಷ್ಟ್ಯ 'ಅಂಕಣ ಬರಹ', 'ಲಲಿತ ಪ್ರಬಂಧ'ಗಳು ಅವರ ನೋಟಕ್ಕೆ ದೃಷ್ಟಿಯಾದವು. ಸಮಸ್ಯೆಗಳ ಕುರಿತು ವಿವೇಚಿಸಿ, ವಿಶ್ಲೇಷಿಸುವ ರೀತಿ, ವಕ್ರೋಕ್ತಿ ವ್ಯಂಗೋಕ್ತಿಗಳೊಡಗೂಡಿ ವ್ಯವಸ್ಥೆಯನ್ನು ವಿಡಂಬಿಸುತ್ತ ಕಟಕಿಯಾಡುವ ಪರಿ ಮೆಚ್ಚುವಂತದ್ದು. ಎಲ್ಲವನ್ನು ಸದ್ಯಕ್ಕೆ ಎಳೆತಂದು ಹುಯಿಲೆಬ್ಬಿಸಿ ಎಚ್ಚರಿಸುವುದೇ ಅವರ ಬರವಣಿಗೆಯ ಬೇರು. ಈ ಹಿನ್ನೆಲೆಯಲ್ಲಿ ಅವರ ಜೀವನ ಮತ್ತು ಬರಹ ಕೃತಿಗಳನ್ನು ಸಮಕಾಲೀನ ಸಂದರ್ಭಕ್ಕೆ ತಾಳೆ ಹಾಕುವ ಪ್ರಯತ್ನವೇ “ಪ್ರೊ. ವೀರೇಂದ್ರ ಸಿಂಪಿಯವರ ಜೀವನ ಮತ್ತು ಕೃತಿಗಳ ಸಮೀಕ್ಷೆ” ಎಂಬ ವಿಷಯ ಆಯ್ಕೆಗೆ ಮೂಲ ಆಕಾರ.
- ಶರಣಬಸಪ್ಪ ವಡ್ಡನಕೇರಿ
"ಮೊದಲ ಅಧ್ಯಾಯ ಕಳಿಸಿದರು. ಓದುತ್ತಾ ಹೋದಂತೆ ಅದು ಸೀದಾ ತಲೆಯೊಳಗೆ ಇಳಿದಂತಾಗಿ, ಜೊತೆಗೆ ಲಾಜಿಕಲಿ ಘಟನೆಗಳೆಲ್ಲ ಫಿ...
"ಕನ್ನಡ ನಾಡಿನಿಂದ ಅಮೇರಿಕಾಗೆ ವಲಸೆ ಹೋಗುವ, ಅಲ್ಲಿ ತಮ್ಮ ಪ್ರತಿಭೆಯಿಂದ ಬೆಳಗುವ ಕನ್ನಡಿಗರು ತಮ್ಮ ಅಸ್ತಿತ್ವವನ್ನ...
"ದಶಕಗಳಿಂದ ಕಾವ್ಯ ಬರೆಯುತ್ತ ಬಂದಿರುವ ಗೋವಿಂದ ಹೆಗಡೆಯವರ ಮೊದಲ ಹಾಗೂ ಕೊನೆಯ ನಿಷ್ಠೆ ಕವಿತೆಯಲ್ಲಿದೆ. ಕಾವ್ಯಕ್ಕಿ...
©2025 Book Brahma Private Limited.