ವಚನಗಳು ಸಾರ್ವಕಾಲಿಕ ಸತ್ಯದ ನುಡಿಮುತ್ತುಗಳು: ಓಲೇಮಠ ಶ್ರೀಗಳು

Date: 04-07-2021

Location: ಗೂಗಲ್..ಮೀಟ್


12ನೇ ಶತಮಾನದ ಶಿವಶರಣರ ವಚನಗಳಿಗೆ ಸಾರ್ವಕಾಲಿಕ ಸತ್ಯಗಳಾಗಿವೆ. ಅವು ಅಮರ ಸತ್ಯದ ನುಡಿಮುತ್ತುಗಳು ಎಂದು ಜಮಖಂಡಿಯ ಓಲೇಮಠದ ಡಾ.ಚನ್ನಬಸವ ಮಹಾಸ್ವಾಮಿಗಳು ಹೇಳಿದರು.

ಕರ್ನಾಟಕ ಜಾನಪದ ಪರಿಷತ್ತು, ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಭಾನುವಾರ ಬೆಳಿಗ್ಗೆ ಅಂತರ್ಜಾಲ ತಾಣದಲ್ಲಿ ನೇರವಾಗಿ ಪ್ರಸಾರಿತವಾದ ‘ಆಧುನಿಕ ವಚನ ಸಿಂಚನ’ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಅವರು ಮಾತನಾಡಿದರು.

ಶಿವಶರಣರ ವಚನಗಳೆಂದರೆ ಮನೋಸ್ಥೈರ್ಯಕ್ಕೆ ಬುನಾದಿಗಳು. ಮನೋತೃಪ್ತಿಗೆ ಮೂಲ ಅಂಶಗಳು. ಎಂದಿಗೂ ಅಮರ ಸಂದೇಶವನ್ನು ಹೊಂದಿದ್ದು, ಅಂತಿಮ ಸತ್ಯದ ನುಡಿಗಳಾಗಿವೆ. ಆದ್ದರಿಂದ, ನಮ್ಮೆಲ್ಲ ಸಮಸ್ಯೆಗಳಿಗೆ ಪರಿಹಾರವಾಗಿ ವಚನಗಳಿವೆ . ಈ ವಚನಗಳ ಅಧ್ಯಯನ, ಮನನ, ಪಠಣ ಮಾಡಬೇಕು. ಆಗಲೇ ಸತ್ಯದ ದರ್ಶನವಾಗುತ್ತದೆ, ಬುದಕಿನ ಸಾರ್ಥಕತೆಯೂ ಈ ವಚನಗಳ ಓದಿನಲ್ಲಿ ಇದೆ ಎಂದು ಹೇಳಿದರು.

ಬಾಗಲಕೋಟೆಯ ಬಿಟಿಡಿಎ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಲ್ಲಿಕಾರ್ಜುನ ಶೆಲ್ಲಿಕೇರಿ ಸಮಾರಂಭ ಉದ್ಘಾಟಿಸಿ, ವಚನ ಪರಂಪರೆಯ ಮುಂದುವರಿಕೆಯು ಆರೋಗ್ಯಕರ ಸಮಾಜ ಬಯಸುವ ಪ್ರತಿಯೊಬ್ಬರ ಹೊಣೆಗಾರಿಕೆಯಾಗಿದೆ ಎಂದು ಅಭಿಪ್ರಾಯಪಟ್ಟರು.

ಸಾಹಿತಿ ಎ,ಎಸ್.ಪಾವಟೆ ಆಧ್ಯಕ್ಷತೆ ವಹಿಸಿ ಆಧುನಿಕ ಕಾಲದಲ್ಲಿಯೂ ವಚನ ಸಾಹಿತ್ಯದ ಅಸ್ತಿತ್ವ ಕುರಿತು ವಿಶ್ಲೇಷಿಸಿದರು.ಅತಿಥಿಗಳಾಗಿ ವಿ.ಜಿ.ರೇವಡಿಗಾರ ಹಾಗೂ ಸಿದ್ದರಾಮ ಶಿರೋಳ ಮಾತನಾಡಿ, ‘ಈ ಕರೋನಾ ಕಾಲಘಟ್ಟದಲ್ಲಿಯೂ ಸೈನಿಕರು ಹಾಗೂ ರೈತರು ನಿರಂತರ ಕಾಯಕ ಮಾಡಿದ್ದು, ಅವರ ಋಣದಲ್ಲಿದ್ದೇವೆ ಎಂದರು. ಬಿ.ಎನ್.ಅಸ್ಕಿ,ಸುಭಾಷ ರಾಠೋಡ ಉಪಸ್ಥಿತರಿದ್ದರು.

ಗುರುರಾಜ ಲೂತಿ ಆಶಯ ನುಡಿಗಳನ್ನಾಡಿದರು. ಸಂಗಮೇಶ ಪಾನಶೆಟ್ಟಿ,ರವೀಂದ್ರ ಉಪ್ಪಾರ ಪ್ರಾರ್ಥಿಸಿದರು. ಗೊಳಸಂಗಿ ,ಸೋಮನಕಟ್ಟಿ ನಿರೂಪಿಸಿದರು. ಕಾರ್ಯಕ್ರಮದ ಸಂಯೋಜಕರಾದ ಮಹಾಂತೇಶ ನರಸನಗೌಡ್ರ,ಶಿವಾನಂದ ಶೆಲ್ಲಿಕೇರಿ, ಶಿವಾನಂದ ಕುಬಸದ,ಚಂದ್ರಶೇಖರ ದೇಸಾಯಿ ಸಂಗಮೇಶ ನೀಲಗುಂದ,ಮಲ್ಲಿಕಾರ್ಜುನ ಅರಬಿ,ಆನಂದ ಪೂಜಾರಿ ನೂರಕ್ಕು ಹೆಚ್ಚು ಕಾವ್ಯಾಸಕ್ತರು ಪಾಲ್ಗೊಂಡಿದರು.

MORE NEWS

ಆಗಮಡಂಬರ ಕೃತಿಯನ್ನು ರಂಗಕ್ಕೆ ತರುತ್ತೇನೆ: ಪ್ರಕಾಶ್ ಬೆಳವಾಡಿ

09-03-2025 ಬೆಂಗಳೂರು

ಬೆಂಗಳೂರು: "ಕೃತಿಯು ರಂಗ ಪ್ರಯೋಗಕ್ಕೆ ತಕ್ಕಂತೆ ಇಲ್ಲ ಎಂದು ವಿಜಯ ಸಿಂಹ ಈ ಕೃತಿಯಲ್ಲಿ ಹೇಳಿದ್ದಾರೆ. ಆದರೆ, ನಾನು...

ವಿಶ್ವಸಾಹಿತಿಗೆ ಗೌರವ ನಮನ: ಎಸ್‌. ಎಲ್‌. ಭೈರಪ್ಪನವರಿಗೆ ಸನ್ಮಾನ ಮಹೋತ್ಸವ

08-03-2025 ಹಾಸನ

ಹಾಸನ: ಸಾಹಿತ್ಯ ಮತ್ತು ಸಂಸ್ಕೃತಿಯ ಮಹಾನದಿಯಂತೆ ಹರಿದು, ಜಗತ್ತಿನ ಓದುಗರ ಮನಸ್ಸು ಮೆಚ್ಚಿ, ಕನ್ನಡದ ಗರಿಮೆಯನ್ನು ವಿಶ್ವ...

karnataka sahitya akademi award: ಸಬಿಹಾ ಭೂಮಿಗೌಡ ಸೇರಿ ಐವರಿಗೆ ಸಾಹಿತ್ಯ ಅಕಾಡೆಮಿ ವರ್ಷದ ಗೌರವ

08-03-2025 ಬೆಂಗಳೂರು

ಬೆಂಗಳೂರು: 2023ರ ಕರ್ನಾಟಕ ಸಾಹಿತ್ಯ ಅಕಾಡೆಮಿ ವರ್ಷದ ಗೌರವ ಪ್ರಶಸ್ತಿಗೆ ಡಾ. ಸಿ. ವೀರಣ್ಣ, ಡಾ. ಶ್ರೀರಾಮ ಇಟ್ಟಣ್ಣವರ,...